ಮುಲ್ಕಿ: ತಲೆ ಮರೆಸಿಕೊಂಡ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಸಹಕರಿಸಲು ಪೊಲೀಸ್ ಮನವಿ

ಮಂಗಳೂರು: ನಗರದ ಮುಲ್ಕಿಯಲ್ಲಿ ನಡೆದಿರುವ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಸಹಕರಿಸಬೇಕೆಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ  1ನೆ ಆರೋಪಿ ಬಪ್ಪನಾಡು ನಿವಾಸಿ ದಾವೂದ್ ಹಕೀಮ್ ನನ್ನು ದಸ್ತಗಿರಿ ಮಾಡಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಈಗಾಗಲೇ ನ್ಯಾಯಾಲಯವು ಹಲವು ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿದೆ. ಅಲ್ಲದೆ ಈತನ ವಿರುದ್ಧ ನ್ಯಾಯಾಲಯವು ಪ್ರೋಕ್ಲಮೇಶನ್ ಕೂಡ ಹೊರಡಿಸಲಾಗಿದೆ. ಆದರೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.

ಆರೋಪಿ ಈವರೆಗೆ ಪತ್ತೆಯಾಗದೆ ಇರುವುದರಿಂದ ಈ ಕೆಳಗಿನ ಚಹರೆ ಇರುವ ವ್ಯಕ್ತಿಯು ಕಂಡು ಬಂದರೆ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಲಾಗಿದೆ. ಪೊಲೀಸ್ ನಿರೀಕ್ಷಕರು, ಮುಲ್ಕಿ ಪೊಲೀಸ್ ಠಾಣೆ: 9480805332, ಪೊಲೀಸ್ ಉಪ ನಿರೀಕ್ಷಕರು ಮುಲ್ಕಿ ಪೊಲೀಸ್ ಠಾಣೆ 9480805359