-->
ಸುಳ್ಯ: ನೆಹರೂ ಕಾರು ಚಾಲಕರಾಗಿದ್ದ, ಶತಾಯುಷಿ ಮೋನಪ್ಪ ಗೌಡ ಇನ್ನಿಲ್ಲ

ಸುಳ್ಯ: ನೆಹರೂ ಕಾರು ಚಾಲಕರಾಗಿದ್ದ, ಶತಾಯುಷಿ ಮೋನಪ್ಪ ಗೌಡ ಇನ್ನಿಲ್ಲ


ಸುಳ್ಯ: ಭಾರತದ ಪ್ರಥಮ ಪ್ರಧಾನಿ ದಿ.ಪಂಡಿತ್ ಜವಾಹರ್ ಲಾಲ್ ನೆಹರೂ ಕಾರು ಚಾಲಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ನಿವಾಸಿ ಮೋನಪ್ಪ ಗೌಡ ಕೊರಂಬಡ್ಕ (102) ಬುಧವಾರ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ದಿ.ಪಂಡಿತ್ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟವನ್ನು ಮಾಡಿದ್ದ ಮೋನಪ್ಪ ಗೌಡ ಅವರು, ನೆಹರೂ ಕಾರು ಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಅವರು ಕಡಲ ತೀರದ ಭಾರ್ಗವ ಶಿವರಾಮ ಕಾರಂತರು, ದ.ಕ.ಜಿಲ್ಲೆಯ ಮಾಜಿ ಸಂಸದ ಶ್ರೀನಿವಾಸ ಮಲ್ಯ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರಿಗೂ ಚಾಲಕರಾಗಿ ಸೇವೆ ಸಲ್ಲಿಸಿದ್ದರು.

ಜವಹರಲಾಲ್ ನೆಹರೂ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ಮಂಗಳೂರಿಗೆ ಮೂರು ಬಾರಿ ಬಂದಿದ್ದರು. ಆಗ ಮಂಗಳೂರಿನ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಅವರು ನೆಹರೂ ಅವರಿಗೆ ಕಾರಿನ ವ್ಯವಸ್ಥೆಗೆ ಹೋಟೆಲ್ ತಾಜ್ ಮಹಲ್ ಅನ್ನು ಸಂಪರ್ಕಿಸಿದ್ದರು. ಆಗ ಮೋನಪ್ಪ ಗೌಡರು ಹೋಟೆಲ್ ತಾಜ್ ಮಹಲ್ ನವರ ಕಾರು ಚಾಲಕರಾಗಿದ್ದರು. ಆದ್ದರಿಂದ ನೆಹರೂ ಅವರಿಗೆ ಕಾರಿಗೆ ಚಾಲಕರಾಗಿ ಕಾರ್ಯ ನಿರ್ವಹಿಸುವ ಅವಕಾಶ ತಾನಾಗಿಯೇ ಮೋನಪ್ಪ ಗೌಡ ಅವರಿಗೆ ಒಲಿದಿತ್ತು. ಆದ್ದರಿಂದ ಜವಾಹರಲಾಲ್ ನೆಹರೂರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಕರೆತರಲು ಮತ್ತು ಮರಳಿ ವಿಮಾನ ನಿಲ್ದಾಣಕ್ಕೆ ಬಿಡುವ ಕಾರ್ಯವನ್ನು ಮೋನಪ್ಪ ಗೌಡ ಮಾಡಿದ್ದರು.

ಮೋನಪ್ಪ ಗೌಡ ಅವರು ಪುತ್ರ ವೆಂಕಟ್ರಮಣ ಕೊರಂಬಡ್ಕ, ಪುತ್ರಿಯರಾದ ಕಮಲ, ವಿಮಲ, ಕುಸುಮ ಅವರನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100