ಮಂಗಳೂರು: ಮೀನು ಹಿಡಿಯಲು ಹೋದ ವೃದ್ಧ ದೋಣಿ ಮಗುಚಿ ಮೃತ್ಯು

ಮಂಗಳೂರು: ನಗರದ ಹೊರವಲಯದಲ್ಲಿನ ಹರೇಕಳ - ಅಡ್ಯಾರ್ ಅಣೆಕಟ್ಟೆ ಬಳಿ ಮೀನು ಹಿಡಿಯಲು ಹೋದ ವೃದ್ಧರೋರ್ವರು ದೋಣಿಯೊಂದು ಮಗುಚಿ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ.

ಅಡ್ಯಾರ್ ಕಟ್ಟೆ ನಿವಾಸಿ ರಾಬರ್ಟ್ ಫೆರಾವೊ(77) ಮೃತಪಟ್ಟ ವ್ಯಕ್ತಿ.


ಅಡ್ಯಾರ್ ಕಟ್ಟೆಯ ಬಳಿ ತಮ್ಮದೇ ದೋಣಿಯಲ್ಲಿ ರಾಬರ್ಟ್ ಫೆರಾವೊ ಆದಿತ್ಯವಾರ ಮೀನು ಹಿಡಿಯಲು ಹೋಗಿದ್ದಾರೆ. ಸಂಜೆ 4.30ರ ಸುಮಾರಿಗೆ ನೀರಿನ ರಭಸಕ್ಕೆ ಇವರಿದ್ದ ಮಗುಚಿಬಿದ್ದು ನೀರುಪಾಲಾದ ಅವರು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu