ಸ್ನೇಹಿತನ ಮನೆಯಲ್ಲಿಯೇ ಚಿನ್ನಾಭರಣ ಕಳವುಗೈದಿದ್ದ ಪೊಲೀಸ್ ಕಾನ್ ಸ್ಟೇಬಲ್ ಅರೆಸ್ಟ್

ಕೊಚ್ಚಿ: ಸ್ನೇಹಿತನ ಮನೆಯಲ್ಲಿಯೇ ಚಿನ್ನಾಭರಣವನ್ನು ಕಳವುಗೈದಿರುವ ಆರೋಪದ ಮೇಲೆ ಪೊಲೀಸ್ ಕಾನ್ ಸ್ಟೇಬಲ್ ಓರ್ವನು ಘಟನೆ ಕೇರಳದ ಕೊಚ್ಚಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ‌.  

ಕೊಚ್ಚಿಯ ಎ.ಆರ್ . ಕ್ಯಾಂಪ್‌ನಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಮಲ್ ದೇವ್ ಎಂಬಾತ ಬಂಧಿತ ಪೊಲೀಸ್ ಪೇದೆ. 

ಎರ್ನಾಕುಲಂನ ಜರಾಕಲ್‌ನಲ್ಲಿರುವ ಸ್ನೇಹಿತ ನಟೇಶನ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಕದ್ದ ಚಿನ್ನಾಭರಣಗಳು ನಟೇಶನ್ ಅವರ ಸೊಸೆಗೆ ಸಂಬಂಧಿಸಿದ್ದಾಗಿವೆ. ಮನೆಯಿಂದ ಸುಮಾರು 10 ಸವರನ್ ಚಿನ್ನ ಕಳ್ಳತವಾಗಿದೆ. ಮನೆಗೆ ಬಂದಿದ್ದ ಅಮಲ್ , ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಸಂಬಂಧ ನಟೇಶನ್ ದೂರು ದಾಖಲಿಸಿದ್ದರು. 

ಈ ದೂರಿನನ್ವಯ ಪರಾರಿಯಾಗಿದ್ದ ಆರೋಪಿ ಅಮಲ್‌ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮಲ್‌ಗೆ ಸಾಕಷ್ಟು ಸಾಲ ಇರುವುದಾಗಿ ತಿಳಿದುಬಂದಿದೆ. ಅಲ್ಲದೆ ಆನ್‌ಲೈನ್ ಜೂಜಿನ ಚಟ ಅಂಟಿಸಿಕೊಂಡಿದ್ದ ಅಮಲ್, ಸಾಲವನ್ನು ತೀರಿಸಲು ಕಳ್ಳತನ ಮಾಡಿದ್ದಾನೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu