ಕೆಸಿಇಟಿ ಆರ್ಕಿಟೆಕ್ಚರ್ -2022 ಫಲಿತಾಂಶ: ಆಳ್ವಾಸ್‌ನ 4 ವಿದ್ಯಾರ್ಥಿಗಳಿಗೆ ಟಾಪ್ 100ರ ಒಳಗೆ ರ‍್ಯಾಂಕ್




ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸಿಇಟಿ -2022ರ ಆರ್ಕಿಟೆಕ್ಚರ್ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಿದ್ದು, ರಾಜ್ಯ ಮಟ್ಟದ ಆರ್ಕಿಟೆಕ್ಚರ್ ವಿಭಾಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳಾದ ಪರೀಕ್ಷಿತ್ ಎಚ್ ಸಿ 53ನೇ ರ‍್ಯಾಂಕ್, ಕೆ.ಪಿ. ಆರ್ಯ ಪೂವಣ್ಣ 63ನೇ ರ‍್ಯಾಂಕ್, ಆರ್ಯನ್ ಕೆ. ಜೈನ್ 81ನೇ ರ‍್ಯಾಂಕ್ ಹಾಗೂ ಸುಮೇಧ್ ಜಿ ಭಟ್ 98ನೇ ರ‍್ಯಾಂಕ್ ಪಡೆದಿದ್ದಾರೆ. 

ವಿದ್ಯಾರ್ಥಿಗಳಾದ ಖುಷಿ ಇನ್ನಾನಿ (105ನೇ ರ‍್ಯಾಂಕ್), ಪ್ರಜ್ವಲ್ ಆರ್ (160ನೇ ರ‍್ಯಾಂಕ್), ಗೋಕುಲ್ (268ನೇ ರ‍್ಯಾಂಕ್), ಆದರ್ಶ್ ಅನಂತ್‌ಪುರ್ (366ನೇ ರ‍್ಯಾಂಕ್), ಹೇಮಂತ್ ಕುಮಾರ್ ಎಸ್ (382ನೇ ರ‍್ಯಾಂಕ್), ಗೌತಮಿ ವಿ (445ನೇ ರ‍್ಯಾಂಕ್), ತೇಜಸ್ವಿನಿ ಆರ್ (733ನೇ ರ‍್ಯಾಂಕ್), ಅಭಿನವ್ ಬಿ ಆರ್ (769ನೇ ರ‍್ಯಾಂಕ್), ಕರಣ್ ಕೋಟೆಮನೆ (778ನೇ ರ‍್ಯಾಂಕ್),  ಹಜ್ಞಾ ಬಿ ಪಿ (797ನೇ ರ‍್ಯಾಂಕ್), ಕಿಶನ್ ಕುಮಾರ್ (970ನೇ ರ‍್ಯಾಂಕ್) ಗಳಿಸಿದ್ದಾರೆ. 

ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಪ್ರಾಚಾರ್ಯ ಪ್ರೊ. ಎಂ ಸದಾಕತ್, ನಾಟಾ  ಸಂಯೋಜಕ ಗೌತಮ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.