ಮಂಗಳೂರು: ಬಸ್ ಢಿಕ್ಕಿ ಹೊಡೆದು 12ರ ಬಾಲಕ ಮೃತ್ಯು

ಮಂಗಳೂರು: ಅತೀ ವೇಗದಿಂದ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿರುವ ಬಸ್ಸೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ 12 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ನಗರದ ಲಾಲ್‌ಭಾಗ್‌ ಬಳಿ ನಡೆದಿದೆ.

ಪಡೀಲ್ ಕಣ್ಣೂರು ನಿವಾಸಿ ರಕ್ಷಣ್ (13) ಮೃತಪಟ್ಟ ಬಾಲಕ.  

ಬಾಲಕ ರಕ್ಷಣ್ ತನ್ನ ಸಂಬಂಧಿ ನಾರಾಯಣ ಎಂಬವರೊಂದಿಗೆ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಸಂಚರಿಸುತ್ತಿದ್ದ. ಇವರು ಸ್ಕೂಟರ್ ನಲ್ಲಿ ಕೊಟ್ಟಾರ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಮಂಗಳೂರು - ಕಿನ್ನಿಗೋಳಿ - ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಸವಾರ ನಾರಾಯಣ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಸಂಬಂಧಿ ಬಾಲಕ ರಕ್ಷಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  

ಈ ಬಗ್ಗೆ ಸಂಚಾರಿ ಪಶ್ವಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.