-->

ಮಂಗಳೂರು: ವಂಚಿತ ವರ್ಗಕ್ಕೆ ಹಣ ನೀಡುವುದಲ್ಲ, ಬದಲಾಗಿ ಅವಕಾಶ ನೀಡಬೇಕು; ಡಾ.ಡಿ‌.ವೀರೇಂದ್ರ ಹೆಗ್ಗಡೆ- ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತಮಹೋತ್ಸವ ಸಮಾರಂಭ

ಮಂಗಳೂರು: ವಂಚಿತ ವರ್ಗಕ್ಕೆ ಹಣ ನೀಡುವುದಲ್ಲ, ಬದಲಾಗಿ ಅವಕಾಶ ನೀಡಬೇಕು; ಡಾ.ಡಿ‌.ವೀರೇಂದ್ರ ಹೆಗ್ಗಡೆ- ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತಮಹೋತ್ಸವ ಸಮಾರಂಭ

ಮಂಗಳೂರು: ದೇಶದಲ್ಲಿ ಅವಕಾಶದ ನಿರ್ಮಾಣದಿಂದ ಬಹಳ ದೊಡ್ಡ ಮಟ್ಟದ ಪರಿವರ್ತನೆ ಆಗಿದೆ‌. ಹಣ ಯಾವತ್ತೂ ಶಾಶ್ವತವಲ್ಲ, ವಂಚಿತ ವರ್ಗಕ್ಕೆ ಅವಕಾಶದ ನಿರ್ಮಾಣ ಮಾಡುವ ಮೂಲಕ ಅವರು ಬೆಳವಣಿಗೆಗೆ ಕಾರಣವಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.










ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿ‌ ಶ್ರೀರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಟರು ಹೊರದೇಶಗಳಲ್ಲಿ ಹೋಗಿ ಮಹತ್ತರವಾದ ಸಾಧನೆ ಮಾಡಿ ಅವಿಭಜಿತ ದ.ಕ.ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ನಮ್ಮ ಜಿಲ್ಲೆ ಮಹತ್ತರ ಸಾಧನೆ ಮಾಡಿದೆ‌. ಮೊದಲು ರಾಷ್ಟ್ರೀಕೃತಗೊಂಡ ಬ್ಯಾಂಕ್ ಗಳಲ್ಲಿ ನಾಲ್ಕು ಬ್ಯಾಂಕ್ ಗಳು ನಮ್ಮ ಜಿಲ್ಲೆಯಲ್ಲಿ ಹುಟ್ಟಿದವು. ವಿಜಯಾ ಬ್ಯಾಂಕ್‌ ನ ಸುಂದರಾಮ ಶೆಟ್ಟರು ಬ್ಯಾಂಕ್ ಅನ್ನು ಅಭಿವೃದ್ಧಿ ಮಾಡಿದ್ದಲ್ಲದೆ, ಜಿಲ್ಲೆಯ ಹಲವರಿಗೆ ಉದ್ಯೋಗ ನೀಡಿ ಜೀವನವನ್ನೂ ಉದ್ದಾರ ಮಾಡಿದ್ದಾರೆ ಎಂದು ಹೇಳಿದರು.


ಜಿಲ್ಲೆಯ ಬಂಟರು ತಮ್ಮ ಬಡತನದ ನಿವಾರಣೆಗೆ ವಿವಿಧ ರಾಜ್ಯಗಳಿಗೆ, ಹೊರದೇಶಗಳಿಗೆ ಹೋಗಿ ಉದ್ದಿಮೆ, ಹೊಟೇಲ್ ನಡೆಸಿ ಸಾಧನೆ ಮಾಡಿದವರು‌. ಇಂದು ಯಶಸ್ವಿ ವೈದ್ಯ, ಯಶಸ್ವಿ ಉದ್ಯಮಿ, ಯಶಸ್ವಿ ಹೊಟೇಲ್ ಉದ್ಯಮಿ, ಯಶಸ್ವಿ ವ್ಯಾಪಾರಿಯಾಗಿ ಬಂಟ ಸಮುದಾಯದವರು ಕಂಡು ಬರುತ್ತಾರೆ. ರಾಜಕೀಯದಲ್ಲೂ ಮಹತ್ತರವಾದ ಸಾಧನೆ ಮಾಡಿದವರಲ್ಲಿ ಬಂಟರು ಇದ್ದಾರೆ ಎಂದರು.

ಭೂಮಸೂದೆ ಕಾನೂನಿಂದ ಜೈನ ಹಾಗೂ ಬಂಟ ಸಮುದಾಯ ಆರ್ಥಿಕವಾಗಿ ಸುಸ್ಥಿತಿಯನ್ನು ಪಡೆಯಿತು. ಹಿಂದೆ ಈ ಸಮುದಾಯದಲ್ಲಿ ಕೆಲಸ ಮಾಡಬೇಕು, ಸಂಪಾದನೆ ಮಾಡಬೇಕೆಂಬ ಇರಾದೆ ಇರಲಿಲ್ಲ. ಒಕ್ಕಲು ಇರುವವರಿಗೆ ಗೇಣಿಗೆ ಭೂಮಿ ನೀಡಿ ಅದರಿಂದ ಬಂದ ಉತ್ಪತ್ತಿಯಿಂದಲೇ ಆತನ ಜೀವನ ಸಾಗುತ್ತಿತ್ತು. ಆದ್ದರಿಂದ ಉದ್ಯೋಗ, ವ್ಯಾಪಾರ, ಸಂಪಾದನೆ ಬೇಕು, ಹೆಚ್ಚು ಕಷ್ಟ ಪಡಬೇಕೆಂಬ ಕಲ್ಪನೆ ಬಂದುದೇ ಭೂಮಸೂದೆ ಕಾನೂನಿಂದ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ನಾವು ಎಷ್ಟು ಲೌಕಿಕವಾಗಿ ತೊಡಗಿಕೊಂಡರೂ ನಮ್ಮ ಮನಸ್ಸು ದೇವರತ್ತ ಇರಬೇಕು. ಆದ್ದರಿಂದ ಎಲ್ಲರಲ್ಲೂ ಒಂದು ವಿನಂತಿಯೇನೆಂದರೆ, ನಮಗೆ ಎಷ್ಟೇ ಸಂಪಾದನೆಯಾಗಲಿ, ಅವಕಾಶ ಸಿಗಲಿ, ಸಂಸ್ಕಾರ ಸಂಸ್ಕೃತಿಯನ್ನು ಬಿಡಬಾರದು ಎಂದು ವೀರೇಂದ್ರ ಹೆಗ್ಗಡೆಯವರು ಕಿವಿಮಾತು ಹೇಳಿದರು.

ಅದಮ್ಯ ಚೇತನ ಫೌಂಡೇಶನ್‌ನ ಸಿಇಒ ತೇಜಸ್ವಿನಿ ಅನಂತ ಕುಮಾರ್‌ ಮಾತನಾಡಿ , ಕೃಷಿ ಕಾರ್ಯ ನಡೆಸುತ್ತ ಭೂಮಿಯ ರಕ್ಷಣೆ ಸಮುದಾಯ ಬಂಟರದ್ದು , ಕನ್ನಡದ ಇತಿಹಾಸ ಉಳಿಸಿ , ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಬಂಟರಿಗೆ ಸಲ್ಲುತ್ತದೆ ಎಂದು ಹೇಳಿದರು . ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲಗುತ್ತು ಪ್ರಸ್ತಾವನೆಗೈದು , ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ನಡೆದು ಬಂದ ಹಾದಿಯನ್ನು ವಿವರಿಸಿ , ಅತಿಥಿಗಳನ್ನು ಸ್ವಾಗತಿಸಿದರು .

 ವಿಬಿಎಂಎಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿವನ್ನು ಡಾ | ಹೆಗ್ಗಡೆ , ಸೀಸಶಕ್ತಿಕರಣ ಯೋಜನೆಗಳನ್ನು ಇಂಡಸ್ಟ್ರೀಸ್ ಹೇರಂಬ ಮುಂಬಯಿಯ ಸಿಎಂಡಿ ಸದಾಶಿವ ಶೆಟ್ಟಿ ಕನ್ಯಾನ ಮತ್ತು ನಿರ್ದೇಶಕಿ ಸುಜಾತ ಎಸ್ . ಶೆಟ್ಟಿ ಮತ್ತು ಪ್ರಯಾಣಿಕ ತಂಗುದಾಣ ಹಾಗೂ ಎಸ್ ಆರ್ ವಿ ಭವನ  ದ್ವಾರವನ್ನು ಬಂಟ್ಸ್ ಕತಾರ್‌ ಅಧ್ಯಕ್ಷೆ ಡಾ | ಪದ್ಮಶ್ರೀ ಆರ್ . ಶೆಟ್ಟಿ ಉದ್ಘಾಟಿಸಿದರು . ಸ್ಮರಣ ಸಂಚಿಕೆ ಮತ್ತು ಅಮೃತಸಿರಿಯನ್ನು ಯುನಿವರ್ಸಲ್ ಗ್ರೂಪ್ ಆಫ್ ಬೆಂಗಳೂರು ಇನ್ ಸ್ಟಿಟ್ಯೂಶನ್ಸ್ ಎಂಡಿ ಉಪೇಂದ್ರ ಶೆಟ್ಟಿ ಮತ್ತು ಕಾರ್ಯದರ್ಶಿ ಪ್ರಗತಿ ಯು ಶೆಟ್ಟಿ ಬಿಡುಗಡೆಗೊಳಿಸಿದರು . 



 ಸಾಧಕಿಯರಾದ ಭಾರತಿ ಶೆಟ್ಟಿ , ಶಕುಂತಳಾ ಶೆಟ್ಟಿ , ರೀನಾ ಶೆಟ್ಟಿ , ಹಸ್ತಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು . ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನಕ್ಕೆ ಸೇವೆ ಸಲ್ಲಿಸಿದ ಮಾಲತಿ ಎಸ್ . ಆಳ್ವ ಶಾಲಿನಿ ಡಿ . ರೈ , ವಿಲಾಸ ಜೆ . ಶೆಟ್ಟಿ , ಶಬರಿ ವಿ . ಶೆಟ್ಟಿ , ಚಂದ್ರಲೇಖ ಎ . ಶೆಟ್ಟಿ , ಜ್ಯೋತಿ ಎ . ಆಳ್ವ ಜಯಲಕ್ಷ್ಮೀ ಆರ್ . ಹೆಗ್ಡೆ , ಲಕ್ಷ್ಮೀ
ಜಯಪಾಲ್ ಶೆಟ್ಟಿ ಅವರಿಗೆ ಗೌರವ ಸಲ್ಲಿಸಲಾಯಿತು . ನಾಲ್ವರಿಗೆ ತಲಾ 25,000 ರೂ.ಗಳಂತೆ ಧನ ಸಹಾಯ ನೀಡಲಾಯಿತು . ಷೇರು ಪ್ರಮಾಣ ಪತ್ರ ವಿತರಿಸಲಾಯಿತು . ಪದಾಧಿಕಾರಿಗಳಾದ ಹೇಮನಾಥ ಶೆಟ್ಟಿ , ಗೋಪಾಲಕೃಷ್ಣ ಶೆಟ್ಟಿ , ಕೃಷ್ಣಪ್ರಸಾದ್ ರೈ , ಸಂಪಿಗೇಡಿ ಸಂಜೀವ ಶೆಟ್ಟಿ ವೀಣಾ ಟಿ . ಶೆಟ್ಟಿ , ಶಾಲಿನಿ ಶೆಟ್ಟಿ ಸೇರಿದಂತೆ ಕಾರ್ಯಕಾರಿ ಪ್ರಮುಖರು , ಸಮಿತಿ ಬಟ ಸಮುದಾಯದ ಪ್ರಮುಖರು , ದ.ಕ. , ಉಡುಪಿ ಕಾಸರಗೋಡು ಜಿಲ್ಲೆಗಳ ಬಂಟರ ಸಂಘದ ವಿವಿಧ ವಿಭಾಗಗಳ ಅಧ್ಯಕ್ಷರು , ಪದಾಧಿಕಾರಿಗಳು ಉಪ - ಸ್ಥಿತರಿದ್ದರು . ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತೋತ್ಸವ ಸಮಿತಿ ಅಧ್ಯಕ್ಷೆ ವೀಣಾ ಟಿ . ಶೆಟ್ಟಿ ವಂದಿಸಿದರು . ಮಂಜುಳಾ ಶೆಟ್ಟಿ ಮತ್ತು ನಯನಾ ಶೆಟ್ಟನಿರೂಪಿಸಿದರು .

Ads on article

Advertise in articles 1

advertising articles 2

Advertise under the article