-->
OP - Pixel Banner ad
ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೆ. ರವೀಂದ್ರ ಶೆಟ್ಟಿ

ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೆ. ರವೀಂದ್ರ ಶೆಟ್ಟಿ

ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೆ. ರವೀಂದ್ರ ಶೆಟ್ಟಿ

ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ (ಹಿಂದುಳಿದ ವರ್ಗಗಳ ಪ್ರವರ್ಗ-1) ಜನಾಂಗಗಳ ಒಕ್ಕೂಟ (ರಿ.) ಇದರ ಗೌರವಧ್ಯಕ್ಷರಾಗಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜ್ಯ ಅಧ್ಯಕ್ಷರಾಗಿ ತುಕಾರಾಮ ನಾಗಪ್ಪ ವಾಷ್ಟರ ಅವರು ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ (ಹಿಂದುಳಿದ ವರ್ಗ ಪ್ರವರ್ಗ-1)ರ ಜನಾಂಗಗಳ ಒಕ್ಕೂಟದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ, ಗುರುತಿನ ಚೀಟಿ ನೀಡುವ ಕಾರ್ಯಕ್ರಮ ಬೆಂಗಳೂರಿನ ಅಲೆಮಾರಿ ಅಭಿವೃದ್ಧಿ ನಿಗಮದ ಹಾಲ್ ನಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವಿಶೇಷ ಆಹ್ವಾನಿತರಾಗಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ದೇವೇಂದ್ರನಾಥ್ ನಾದ್ ರವರು ಭಾಗವಹಿಸಿ ಅಲೆಮಾರಿ ಜನರ ಸರ್ವೋತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು ಮಾಡುವುದಾಗಿ ತಿಳಿಸಿ ನಿಕಟ ಪೂರ್ವ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಬಹಳಷ್ಟು ಕೆಲಸ ಕಾರ್ಯ ಮಾಡಿದ್ದಾರೆ ನಾನೂ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ನಿಗಮಕ್ಕೆ ಸರಕಾರ 100 ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದರು.ಬಳಿಕ ಈ ಕ್ಕೂಟದ ಗೌರವಾಧ್ಯಕ್ಷ ರು ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಕೆ ರವೀಂದ್ರ ಶೆಟ್ಟಿ ಯವರು ಒಕ್ಕೂಟದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ, ಗುರುತಿನ ಚೀಟಿ ನೀಡಿ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು . 


ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ಅತ್ಯಂತ ಸೂಚನೀಯವಾಗಿ ಜೀವನ ಸಾಗಿಸುತ್ತಿರುವ ಅಲೆಮಾರಿ ಜನರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಮತ್ತು ಈ ಜನರ ಅಭಿವೃದ್ಧಿ ಮಾಡುವ ಸದುದ್ದೇಶವನ್ನು ಈ ಒಕ್ಕೂಟ ಹೊಂದಿದೆ ಅಲ್ಲದೆ ಅಲೆಮಾರಿ ಜನರ ಸಾಂಸ್ಕೃತಿಕ ಕಲಾ ಉತ್ಸವ ಮತ್ತು ರಾಜ್ಯ ಮಟ್ಟದ ಅಲೆಮಾರಿ ಜನಾಂಗದ ಸಮಾವೇಶವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಒಕ್ಕೂಟ ಅಧ್ಯಕ್ಷರಾಗಿ ನೇಮಕಾತಿ ಆದೇಶ ಪತ್ರ ಸ್ವೀಕರಿಸಿದ ತುಕಾರಾಮ ನಾಗಪ್ಪ ವಾಷ್ಟರ ಮಾತನಾಡಿ ಎಲ್ಲರ ಸಹಕಾರ ಪಡೆದು ಎಲ್ಲರ ವಿಶ್ವಾಸ ಗಳಿಸಿ ಈ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ ಕೆಲಸ ಮಾಡಲಿದೆ ಎಂದರು.


ಒಕ್ಕೂಟದ ಪ್ರಧಾನ ಸಂಚಾಲಕ ಪ್ರಕಾಶ್ ಎಮ್ ಬೆಂಗಳೂರು ಎಲ್ಲರನ್ನು ಸ್ವಾಗತಿಸಿ ಬಳಿಕ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟ ಪೂರ್ವ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಅಲೆಮಾರಿ ಜನರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದರಿಂದ ರಾಜ್ಯ ಸರ್ವ ಅಲೆಮಾರಿ ಜನರು ಅವರನ್ನು ಸದಾ ನೆನಪಿಸಿ ಕೊಳ್ಳುತ್ತಿದ್ದಾರೆ ಎಂದರು. ವೇದಿಕೆಯಲ್ಲಿ ಅಲೆಮಾರಿ ಜನಾಂಗದ ಪ್ರಮುಖರಾದ ನಾರಾಯಣ ಸ್ವಾಮಿ, ಒಕ್ಕೂಟದ ಕೋಶಾಧಿಕಾರಿ ಉಲ್ಲಪ್ಪ ಅಪ್ಪಣ್ಣ ಜಾಡರ್ ಹಾವೇರಿ, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ಚೈತ್ರ ಬೆಂಗಳೂರು,ರಾಜ್ಯ ಯುವ ಘಟಕದ ಅಧ್ಯಕ್ಷ ಸಚಿನ್ ದಳವಾಯಿ ಉಪಸ್ಥಿತರಿದ್ದರು.ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಕಾರ್ಯಧ್ಯಕ್ಷ ಶಂಕರ್ ಹೆಬ್ಬಳ್ಳಿ ಧನ್ಯವಾದ ನೀಡಿದರು.ಇದೆ ಸಂಧರ್ಭ ಒಕ್ಕೂಟದ ವತಿಯಿಂದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ ದೇವೇಂದ್ರನಾಥ್ ನಾದ್ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟ ಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು.
Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242