-->
ಚೆನ್ನೈ: 62 ವರ್ಷಗಳ ಹಿಂದೆ ತಮಿಳುನಾಡಿನ ದೇವಸ್ಥಾನದಿಂದ ಕಳುವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್‌ನಲ್ಲಿ ಪತ್ತೆ

ಚೆನ್ನೈ: 62 ವರ್ಷಗಳ ಹಿಂದೆ ತಮಿಳುನಾಡಿನ ದೇವಸ್ಥಾನದಿಂದ ಕಳುವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್‌ನಲ್ಲಿ ಪತ್ತೆ

                          ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡು ರಾಜ್ಯದ ದೇವಾಲಯದಿಂದ 62 ವರ್ಷಗಳ ಹಿಂದೆ ಕಳವುಗೈಯ್ಯಲಾಗಿದ್ದ ನಟರಾಜನ ಮೂರ್ತಿಯೀಗ ನ್ಯೂಯಾರ್ಕ್‌ನಲ್ಲಿ ಇರುವುದಾಗಿ ಪತ್ತೆಯಾಗಿದೆ. ಸಿಐಡಿ ಮೂರ್ತಿ ಘಟಕ ಈ ಮೂರ್ತಿ ಇರುವುದನ್ನು ಪತ್ತೆ ಮಾಡಿದೆ. 

ತಮಿಳುನಾಡಿನ ತಂಜಾವೂರು ಜಿಲ್ಲೆಯ 2000 ವರ್ಷಗಳಷ್ಟು ಪುರಾತನವಾದ ಅರುಳ್‌ಮಿಗು ವೇದಪುರೀಶ್ವರ ದೇವಸ್ಥಾನದಲ್ಲಿದ್ದ 62 ವರ್ಷಗಳ ಹಿಂದಿನ ಈ ನಟರಾಜ ಮೂರ್ತಿಯನ್ನು ಕಳವು ಮಾಡಲಾಗಿತ್ತು. ಸೆ. 1ರಂದು ಗ್ರಾಮಸ್ಥರೊಬ್ಬರು ನೀಡಿರುವ ದೂರಿನನ್ವಯ ಸಿಐಡಿ ಐಡಲ್ ವಿಂಗ್ ತನಿಖೆ ನಡೆಸಿದ ದೇವಸ್ಥಾನದಲ್ಲಿ ಸದ್ಯ ಇರುವ ಮೂರ್ತಿ ನಕಲಿ ಎಂಬುದು ತಿಳಿದು ಬಂದಿದೆ. 

ಆಗ ಅಸಲಿ ಮೂರ್ತಿ ಕಳವಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಪುದುಚೇರಿಯ ಇಂಡೋ - ಫ್ರೆಂಚ್ ಇನ್ ಸ್ಟಿಟ್ಯೂಟ್‌ನಿಂದ ಮೂರ್ತಿಯ ಮೂಲಚಿತ್ರವನ್ನು ಪಡೆದು ಹೆಚ್ಚಿನ ತನಿಖೆ ನಡೆಸಿದಾಗ ಅಸಲಿ ಮೂರ್ತಿ ನ್ಯೂಯಾರ್ಕ್ ಏಷ್ಯಾ ಸೊಸೈಟಿ ಮ್ಯೂಸಿಯಮ್‌ನಲ್ಲಿ ಇರುವುದು ತಿಳಿದುಬಂದಿತ್ತು. ದೇವಸ್ಥಾನದಿಂದ ಇತರ ಮೂರ್ತಿಗಳೇನಾದರೂ ಕಳವಾಗಿದೆಯೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮ್ಯೂಸಿಯಮ್‌ನ ವೆಬ್‌ಸೈಟ್ ಮೂಲಕ ಪರಿಣತರು ಮೂರ್ತಿಯನ್ನು ಪರಿಶೀಲಿಸಿದ್ದು, ಅದು ಅಸಲಿ ಎಂಬುದು ಸ್ಪಷ್ಟಪಡಿಸಿದ್ದಾರೆ. ಯುನೆಸ್ಕೋ ಒಪ್ಪಂದದ ಪ್ರಕಾರ ಆ ಮೂರ್ತಿಯನ್ನು ಮರಳಿ ಅದೇ ದೇವಸ್ಥಾನಕ್ಕೆ ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article