-->

 ಸಿಎ ಫೌಂಡೇಷನ್ ಕೋರ್ಸ್  2022-23: ಓರಿಯೆಂಟೇಷನ್ ಕಾರ‍್ಯಕ್ರಮ

ಸಿಎ ಫೌಂಡೇಷನ್ ಕೋರ್ಸ್ 2022-23: ಓರಿಯೆಂಟೇಷನ್ ಕಾರ‍್ಯಕ್ರಮ


 ಮೂಡುಬಿದಿರೆ:  ಸ್ಪಷ್ಟ ಗುರಿ ಹಾಗೂ ಗುರಿಯ ಸಾಧನೆಗೆಗಾಗಿ ಶ್ರಮ ಮಿಳಿತಗೊಂಡಾಗ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ  ಎಂದು  ದಕ್ಷಿಣ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ವಿದ್ಯಾರ್ಥಿಗಳ ಸಂಘ(ಸಿಕಾಸ) ಮಂಗಳೂರು ಶಾಖೆಯ ಅಧ್ಯಕ್ಷ  ಸಿಎ ಡೇನಿಯಲ್ ಮಾರ್ಷ ಪೆರೆರ ನುಡಿದರು. 

ಅವರು ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗ ಹಾಗೂ ಮಂಗಳೂರಿನ ಸಿರ್ಕ ಹಾಗೂ ಸಿಕಾಸ ಸಹಯೋಗದಲ್ಲಿ  ನಡೆದ ಸಿಎ ಫೌಂಡೇಷನ್ ಕೋರ್ಸ2022-23 ಸಾಲಿನ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಹಾಗೂ  ಸಿಎ ಇಂಟರ್‌ಮಿಡಿಯೇಟ್ ಮತ್ತು ಸಿಎ ಫೌಂಡೇಷನ್ ಕೋರ್ಸನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಚಾರ್ಟರ್ಡ್ ಅಕೌಂಟೆAಟ್ಸ್ ಆಗಬೇಕೆಂದು ಬಯಸುವವರು ಸ್ಪಷ್ಟ ಯೋಜನೆಯೊಂದಿಗೆ ಕರ‍್ಯಪ್ರವೃತ್ತರಾಗಬೇಕು. ಯಾವುದೇ ಸಂಕಷ್ಟಗಳು ಬಂದರೂ ದರ‍್ಯದಿಂದ ಎದುರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಪ್ರತಿ ಕ್ಷಣವೂ ತನಗೆ ಲಾಭವಾಗುವಂತೆ ನೋಡಿಕೊಳ್ಳಬೇಕು. ಸಮಾಜಕ್ಕೆ ನಮ್ಮಿಂದಾದಷ್ಟು ಕೊಡುಗೆ ನೀಡುವ ಮನಸ್ಥಿತಿಯನ್ನು ಬೆಳಸಿಕೊಂಡಾಗ, ನಮ್ಮ ಜೊತೆ-ಜೊತೆಯಲ್ಲಿ ನಾವು ವಾಸಿಸುವ ಪರಿಸರವೂ ಏಳಿಗೆಯನ್ನು  ಹೊಂದಲು ಸಾಧ್ಯ ಎಂದರು.  



ತ್ರಿಷಾ ಕ್ಲಾಸಸ್‌ನ ಸಂಸ್ಥಾಪಕ ಸಿ ಎ ಗೋಪಾಲಕೃಷ್ಣ ಮಾತನಾಡಿ,  ಆಳ್ವಾಸ್ ವಿದ್ಯಾರ್ಥಿಗಳ ವಿವಿಧ ಕ್ಷೇತ್ರಗಳ ಸಾಧನೆ,  ವಿದ್ಯಾರ್ಥಿಗಳಿಗೆ ಇಲ್ಲಿ ಲಭಿಸುತ್ತಿರುವ ಪೂರಕ ವಾತವರಣವನ್ನು ಸಾಕ್ಷೀಕರಿಸುತ್ತಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ  ಮಾತನಾಡಿ  ಜೀವನದ ಆಕಾಂಕ್ಷೆಗಳ ಸಫಲತೆ ನಮ್ಮ ಕಠಿಣ ಪರಿಶ್ರಮವನ್ನು ಅವಲಂಬಿತವಾಗಿರುತ್ತವೆ. ಸಿಎ ಕೋರ್ಸ್ನ್ನು ಆಯ್ಕೆಮಾಡಿಕೊಂಡಿರುವುದು ಶರ‍್ಯದ ಸಂಕೇತವಾದರೂ, ಕೋರ್ಸನ್ನು ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ ಎಂದೂ ಹೇಡಿಗಳಾಗಬಾರದು ಎಂದರು. 

ಡಿಸೆಂಬರ್ 2021 ಹಾಗೂ ಜುಲೈ 2022 ರಲ್ಲಿ ನಡೆದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 92 ವಿದ್ಯಾರ್ಥಿಗಳು, ಮೇ 2022ರಲ್ಲಿ ನಡೆದ ಸಿಎ ಇಂಟರ್‌ಮಿಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 58 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

 ಕರ‍್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ ಜಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂಡಿ ಉಪಸ್ಥಿತರಿದ್ದರು. 



 ವಿದ್ಯಾರ್ಥಿನಿ ಪ್ರೇರಣಾ ಹೆಬ್ಬಾರ್ ನಿರೂಪಿಸಿ, ಸ್ಪೂರ್ತಿ ಹಾಗೂ ಸ್ನೇಹಾ ಪ್ರಾರ್ಥಿಸಿ, ಸಿಎ ಫೌಂಡೇಷನ್ ಸಂಯೋಜಕ ಅನಂತಶಯನ ಸ್ವಾಗತಿಸಿ, ಸಿಎ ಇಂಟರ್‌ಮಿಡಿಯೇಟ್‌ನ ಸಂಯೋಜಕಿ ಅಪರ್ಣಾ ವಂದಿಸಿದರು.


Ads on article

Advertise in articles 1

advertising articles 2

Advertise under the article