
Sulya :-ಸರಕಾರ ತನಿಖೆ NIA ಗೆ ಕೊಟ್ಟು ನಮ್ಮ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ.. ಎಚ್.ಡಿ ಕುಮಾರಸ್ವಾಮಿ.
8/01/2022 02:49:00 AM
ಸುಳ್ಯ
ಸರಕಾರ ತನಿಖೆ ಏನ್ಐಗೆ ಕೊಟ್ಟು ನಮ್ಮಲ್ಲಿರುವ ಉತ್ತಮ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. NIA ಗೆ ಈ ಹಿಂದೆ ಕೊಟ್ಟ ಯಾವುದೇ ಪ್ರಕರಣಗಳನ್ನೂ ಸರಿಯಾದ ರೀತಿಯಲ್ಲಿ ತನಿಖೆ ಮಾಡಿಲ್ಲ. ಈ ಪ್ರಕರಣವನ್ನು NIA ಕಾಟಚಾರಕ್ಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಅವರು ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಮತ್ತು ಮಹಮ್ಮದ್ ಮಸೂದ್ ಮನೆಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು.ಸರಕಾರವು ಈ ಪ್ರಕರಣವನ್ನು ಏನ್ಐಎ ಕೊಟ್ಟು ಕಾಟಚಾರಕ್ಕೆ ಮಾಡಬಾರದು. ನಮ್ಮಲ್ಲೇ ಸಮರ್ಪಕವಾಗಿ ತನಿಖೆ ಮಾಡುವ ಅಧಿಕಾರಿಗಳು ಇದ್ದರೂ ಅವರನ್ನು ಬದಿಗೊತ್ತಿ ತನಿಖೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಕುಟುಂಬಗಳು ನ್ಯಾಯಾವಂಚಿತರಾಗಬಾರದು. ಈಗಾಗಲೇ ಈ ಎರಡು ಕುಟುಂಬಗಳಿಗೆ ನಮ್ಮ ಕಡೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಿದ್ದೇವೆ ಮತ್ತು ಸಮಸ್ಯೆ ಎದುರಾದಲ್ಲಿ ನನ್ನನ್ನು ಸಂಪರ್ಕಿಸುವಂತೆ ನನ್ನ ದೂರವಾಣಿ ಸಂಖ್ಯೆಯನ್ನೂ ನೀಡಿದ್ದೇನೆ. ಎಂದು ಅವರು ಹೇಳಿದರು. ಪ್ರವೀಣ್ ಕುಟುಂಬಕ್ಕೆ ಭೇಟಿ ನೀಡಿ ನಂತರದಲ್ಲಿ ಮಹಮ್ಮದ್ ಮಸೂದ್ ಮನೆಗೂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.