-->
ನಟಿಮಣಿಯರ ಮಾಲ್ಡೀವ್ಸ್ ಪ್ರವಾಸದ ಹಾಟ್ ಅವತಾರದ ಹಿಂದಿರುವ ಗುಟ್ಟೇನು ಗೊತ್ತೇ?

ನಟಿಮಣಿಯರ ಮಾಲ್ಡೀವ್ಸ್ ಪ್ರವಾಸದ ಹಾಟ್ ಅವತಾರದ ಹಿಂದಿರುವ ಗುಟ್ಟೇನು ಗೊತ್ತೇ?

ಮುಂಬೈ: ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್ ವುಡ್ ​ನ ನಟಿಮಣಿಯರು ಆಗಾಗ ಮಾಲ್ಡೀವ್ಸ್​ಗೆ ಭೇಟಿ ನೀಡುತ್ತಿರುತ್ತಾರೆ. ಅಲ್ಲಿನ ನೀಲಾಕಾಶದ ತಿಳಿ ನೀಲಿ ನೀರಿನ ನಡುವೆ ಫೋಟೋ ಕ್ಲಿಕ್ಕಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಸಂತೋಷ ಪಡಿಸುತ್ತಿರುತ್ತಾರೆ. 

ಮಾಲ್ಡೀವ್ಸ್​ ಅಂದರೆ ಸೆಲೆಬ್ರಿಟಿಗಳ ನೆಚ್ಚಿನ ತಾಣವೆಂದರೆ ತಪ್ಪಾಗಲಾರದು. ಅದರಲ್ಲೂ ನಟಿಮಣಿಯರಿಗಂತೂ ಮಾಲ್ಡೀವ್ಸ್ ಸ್ವರ್ಗವೇ ಸರಿ. ಅವರು ಅಲ್ಲಿಮ ಕಡಲ ಕಿನಾರೆಯಲ್ಲಿ ಮೈಚಳಿ ಬಿಟ್ಟು ಮಿಂದೇಳುತ್ತಿರುತ್ತಾರೆ. ಬಿಕಿನಿ ಧರಿಸಿ ಬೋಲ್ಡ್​ ಅವತಾರದಲ್ಲಿ ಕ್ಯಾಮೆರಾಗಳಿಗೆ ಪೋಸ್​ ಕೊಡುತ್ತಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ. ಪ್ರಪಂಚದ ಎಲ್ಲಾ ಪ್ರವಾಸಿ ತಾಣಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಸೆಲೆಬ್ರಿಟಿಗಳು ಹೋಗುವುದು ಮಾತ್ರ ಮಾಲ್ಡೀವ್ಸ್​ಗೆ. 

ಇನ್ನು ನಟಿಮಣಿಯರ ಮಾಲ್ಡೀವ್ಸ್​ ಪ್ರವಾಸದ ಹಿಂದೆ ಒಂದು ರಹಸ್ಯವಿದೆ ಎಂದು ಹೇಳಲಾಗುತ್ತಿದೆ. ಅದೇನೆಂದರೆ, ನಟಿಯರು ಅಲ್ಲಿನ ಪ್ರವಾಸೋದ್ಯಮದವರ ಒಪ್ಪಂದಕ್ಕೆ ಒಪ್ಪಿದರೆ, ಅವರಿಗೆ ಎಲ್ಲವು ಉಚಿತವಾಗಿ ಸಿಗಲಿದೆಯಂತೆ. ಅಲ್ಲಿನ ರೆಸಾರ್ಟ್​, ಊಟ ಸೇರಿದಂತೆ ಎಲ್ಲ ಸೌಲಭ್ಯವು ಉಚಿತವಾಗಿಯೇ ಸಿಗಲಿದೆ ಎಂದು ಹೇಳಲಾಗುತ್ತಿದೆ. 

ದಿಶಾ ಪಟಾಣಿ, ರಾಕುಲ್​ ಪ್ರೀತ್​, ಸಮಂತಾ ಅಕ್ಕಿನೇನಿ, ಕಾಜಲ್​ ಅಗರ್​ವಾಲ್​, ಕನ್ನಡದ ಪ್ರಣೀತಾ ಸುಭಾಷ್, ವೇದಿಕಾ, ಮಾಳವಿಕಾ ಮೋಹನನ್​, ಅನುಷ್ಕಾ ಶರ್ಮಾ, ತಮ್ಮನ್ನಾ, ಪೂಜಾ ಹೆಗ್ಡೆ, ರೆಬಾ ಮೋನಿಕಾ ಜಾನ್​, ಆಲಿಯಾ ಭಟ್​, ಶಾನ್ವಿ ಶ್ರೀವಾತ್ಸವ, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಹುತೇಕ ನಟಿಯರು ಮಾಲ್ಡೀವ್ಸ್​ನಲ್ಲಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಅವರು ಅಲ್ಲಿ ಸೆರೆಹಿಡಿದ ತಮ್ಮ ಹಾಟ್ ಫೋಟೋಗಳನ್ನು ಇನ್​ಸ್ಟಾಗ್ರಾಂಗಳಲ್ಲಿ ಹಂಚಿಕೊಂಡಿದ್ದಾರೆ. 

ನಟಿಯರು ಬಿಕಿನಿ ಉಡುಗೆಯಲ್ಲಿ ಪೋಸ್​ ನೀಡಿ, ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದರೆ, ಅದಕ್ಕೆ ಪ್ರತಿಯಾಗಿ, ನಟಿಯರಿಗೆ ಮಾಲ್ಡೀವ್ಸ್​ನಲ್ಲಿ ಉಚಿತ ಪ್ರವಾಸ ದೊರೆಯುತ್ತಿದೆಯಂತೆ. ಇದೊಂದು ರೀತಿಯ ಪಾವತಿಸಿದ ಪ್ರಚಾರದ ಭಾಗವಾಗಿದೆ. ನಟಿಯರ ಮೂಲಕ ಮಾಲ್ಡೀವ್ಸ್​ ತನ್ನ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article