ಆ 'ನಟ' ಮಧ್ಯರಾತ್ರಿ ಕರೆದರೂ ಹೋಗಬೇಕು ಇಲ್ಲದಿದ್ದಲ್ಲಿ ಸಿನಿಮಾದಲ್ಲಿ ಪಾತ್ರವಿಲ್ಲ: ತಮ್ಮ ಅನುಭವ ಬಿಚ್ಚಿಟ್ಟ ನಟಿ ಮಲ್ಲಿಕಾ ಶೆರಾವತ್!!
ಮುಂಬಯಿ: ಬಾಲಿವುಡ್ ನಲ್ಲಿ ಗ್ಲಾಮರಸ್ ಪಾತ್ರಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಮಲ್ಲಿಕಾ ಶೆರಾವತ್ ಅವರು ಇದೀಗ ಬಾಲಿವುಡ್ ನ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ, 'ಎ' ಗ್ರೇಡ್ ನಟರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾರಂಗದಲ್ಲಿನ ತಮಗಾದ ಕರಾಳ ಅನುಭವದ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ.
ಮಲ್ಲಿಕಾ ಶೆರಾವತ್ ಅವರು ಆರ್ ಕೆ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿ, ಎ ಗ್ರೇಡ್ ನಟರು ನನ್ನೊಂದಿಗೆ ನಟಿಸಲು ನಿರಾಕರಿಸುತ್ತಾರೆ. ಯಾಕೆಂದರೆ ನಾನು ಅವರೊಂದಿಗೆ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಅವರು ಹೀಗೆ ಮಾಡುತ್ತಾರೆ. ಆದರೆ ನಾನು ಕಾಂಪ್ರಮೈಸ್ ಮಾಡಿಕೊಳ್ಳಲ್ಲ. ನನ್ನ ವ್ಯಕ್ತಿತ್ವ ಅಂಥದ್ದಲ್ಲ ಎಂದವರು ಹೇಳಿದ್ದಾರೆ.
ಕಾಂಪ್ರಮೈಸ್ ಎಂದರೆ ನಟಿಯರು ತಾವು ನಟಿಸುವ ನಟನೊಂದಿಗೆ ಒಳ್ಳೆಯ ರೀತಿಯಲ್ಲಿರಬೇಕು. ಅವರ ನಿಯಂತ್ರಣದಲ್ಲಿರಬೇಕು. ಅವರು ಯಾವಾಗ, ಎಲ್ಲಿಗೆ ಕರೆಯುತ್ತಾರೋ, ರಾತ್ರಿ 3 ಗಂಟೆಗೆ ಕರೆ ಮಾಡಿದರೂ, ಇಲ್ಲ ಅನ್ನದೆ ಹೋಗಬೇಕು. ಇಲ್ಲದಿದ್ರೆ, ಚಿತ್ರದಿಂದ ನಮ್ಮನ್ನು ತೆಗೆಯಲಾಗುತ್ತದೆ ಎಂದು ಶೆರಾವತ್ ಅವರು ಹೇಳಿದ್ದಾರೆ.
ನಾಯಕಿಯಾಗಿ ನಾನು ಎಲ್ಲಾ ನಟ -ನಟಿಯರ ಹಾಗೆ ಒಂದಷ್ಟು ತಪ್ಪುಗಳನ್ನು ಮಾಡಿದ್ದೇನೆ. ಹೆಚ್ಚು ನಟಿಸಲು ಪ್ರಯತ್ನಿಸಿದ್ದೇನೆ. ಉತ್ತಮ ಪಾತ್ರವನ್ನು ಮಾಡಿದ್ದೇನೆ, ಕೆಟ್ಟ ಪಾತ್ರವನ್ನೂ ಮಾಡಿದ್ದೇನೆ. ನನ್ನ ಜರ್ನಿಯ ಬಗ್ಗೆ ನನಗೆ ತೃಪ್ತಿಯಿದೆ. ಆದರೆ ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದೇನೆ ಎಂಬ ಕಾರಣಕ್ಕೆ ಮಂಚದ ವಿಚಾರದಲ್ಲಿ ರಾಜಿಯಾಗೋದಿಲ್ಲ ಎಂದು ಅವರು ಕಟುವಾಗಿ ಹೇಳಿದ್ದಾರೆ.