ನಿರ್ಮಾಪಕ ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದು ಅಲ್ಲಿ ಚರ್ಚೆ ನಡೆಸಿ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಮಾತ್ರವಲ್ಲ ಎರಡು ವರ್ಷಗಳ ಕಾಲ ಸಂಪೂರ್ಣ ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು ಹೊರಗೆ ಹಾಕಲಾಗಿದೆ. ಯಾವುದೇ ಧಾರಾವಾಹಿ ಯಾವುದೇ ಶೋ ದಲ್ಲಿ ಪಾಲ್ಗೊಳ್ಳುವಂತಿಲ್ಲ..
ಇದೀಗ ಆರ್ಯವರ್ಧನ್ ಪಾತ್ರಕ್ಕೆ ಹೊಸ ನಟನನ್ನೂ ಸಹ ಆಯ್ಕೆ ಮಾಡಿಕೊಳ್ಳಲಾಗಿದೆ.ಆ ನಟ ಮತ್ಯಾರೂ ಅಲ್ಲ ಅದು ಜೆಕೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಜನರ ಮನಗೆದ್ದಿದ್ದ ಜೆಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.