ಕಾಸರಗೋಡಿನ ಯುವಕ ಹಾಸನದಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತ್ಯು

ಕಾಸರಗೋಡು: ಹಾಸನದಲ್ಲಿ ಸಂಭವಿಸಿರುವ ಕಾರು ಅಪಘಾತದಲ್ಲಿ ಕಾಸರಗೋಡು ಚೆಂಗಳದ ಯುವಕ ಮೃತಪಟ್ಟ ದುರ್ಘಟನೆಯೊಂದು ರವಿವಾರ ನಡೆದಿದೆ. 

ಚೆಂಗಳ ನೆಲ್ಲಡ್ಕ ನಿವಾಸಿ ರಾಜೀವ್ ಎಂಬವರ ಪುತ್ರ ಆದರ್ಶ್ (28) ಮೃತಪಟ್ಟ ದುರ್ದೈವಿ.

ಆದರ್ಶ್ ಅವರಿಗೆ ಹಾಸನದಲ್ಲಿ ಉದ್ಯೋಗ ಲಭಿಸಿತ್ತು. ಆದ್ದರಿಂದ ಅವರು ಹಾಸನದ ಕಡೆಗೆ ಪ್ರಯಾಣ ಬೆಳೆಸಿದ್ದರು. ಆದರೆ ಈ ವೇಳೆ ನಡೆದ ಕಾರು ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu