-->
ವೇದಿಕೆಯ ಮೇಲಿದ್ದ ಸಲ್ಮಾನ್ ರಶ್ದಿ ಮೇಲೆ ದುಷ್ಕರ್ಮಿಯಿಂದ ಚಾಕು ಇರಿತ: ನರ ಕಟ್, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ವೇದಿಕೆಯ ಮೇಲಿದ್ದ ಸಲ್ಮಾನ್ ರಶ್ದಿ ಮೇಲೆ ದುಷ್ಕರ್ಮಿಯಿಂದ ಚಾಕು ಇರಿತ: ನರ ಕಟ್, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ಷಟೌಕ್ವಾ: ಅಮೆರಿಕಾದ ನ್ಯೂಯಾರ್ಕ್ ಪಶ್ಚಿಮದ ಷಟೌಕ್ವಾದಲ್ಲಿ ಉಪನ್ಯಾಸ ಮಾಡುತ್ತಿದ್ದ ವೇಳೆಯೇ ಖ್ಯಾತ ಲೇಖಕ ಸಲ್ಮಾನ್ ರಶ್ದಿಯವರ (75) ಮೇಲೆ ಶುಕ್ರವಾರ ಚಾಕು ಇರಿತವಾಗಿದೆ. 

ಷಟೌಕ್ವಾ ಸಂಸ್ಥೆಯಲ್ಲಿ ಸಲ್ಮಾನ್ ರಶ್ದಿಯವರ ಉಪನ್ಯಾಸ ನಡೆಯುತ್ತಿತ್ತು. ಈ ವೇಳೆ ವೇಳೆ ವೇದಿಕೆಗೆ ನುಗ್ಗಿದ ದುಷ್ಕರ್ಮಿಯಳರ್ವನು, ರಶ್ದಿಯವರಿಗೆ ಗುದ್ದಿ, ಕುತ್ತಿಗೆ ಹಾಗೂ ಕಿಬ್ಬೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಪರಿಣಾಮ ಕುಸಿದು ಬಿದ್ದ ರಶ್ದಿಯವರನ್ನು ತಕ್ಷಣ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ‌. ಸದ್ಯ ವೆಂಟಿಲೇಟರ್‌ನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಚೂರಿ ಇರಿತದಿಂದ ಅವರ ತೋಳಿನಲ್ಲಿ ನರಗಳು ತುಂಡಾಗಿವೆ ಹಾಗೂ ಅವರ ಯಕೃತ್ತಿಗೆ ಹಾನಿಯಾಗಿದೆ. ಅಲ್ಲದೆ ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಲೇಖಕರ ಸಹಾಯಕ ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸಭೆಯನ್ನು ಆಯೋಜಿಸಿದವರು ದುಷ್ಕರ್ಮಿಯನ್ನು ಹಿಡಿದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ನ್ಯೂಜರ್ಸಿ ಮೂಲದ ಹದಿ ಮತಾರ್ ( 24 ) ಎಂದು ಗುರುತಿಸಲಾಗಿದೆ. ದಾಳಿಯ ಹಿಂದಿರುವ ಉದ್ದೇಶವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ . 

ನ್ಯೂಯಾರ್ಕ್‌ನ ಷಟೌಕ್ವಾದಲ್ಲಿರುವ ಷಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎರಡೂವರೆ ಸಾವಿರ ಜನರು ಭಾಗಿಯಾಗಿದ್ದರು. 'ನಿರೂಪಕರು ಸಲ್ಮಾನ್ ರಶ್ದಿಯನ್ನು ಪರಿಚಯಿಸುತ್ತಿದ್ದ ವೇಳೆ ಏಕಾಏಕಿ ವೇದಿಕೆ ನುಗ್ಗಿದ ದುಷ್ಕರ್ಮಿ, ನಿರೂಪಕರನ್ನು ತಳ್ಳಿಕೊಂಡು ದಾಳಿ ನಡೆಸಿದ್ದಾನೆ. ಸುಮಾರು 10 ರಿಂದ 15 ಬಾರಿ ಇರಿದಿದ್ದಾನೆ. ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

 ಚೂರಿ ಇರಿತದಿಂದ ಅವರ ಜೀವಕ್ಕೇನು ಅಪಾಯವಿಲ್ಲ. ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಉದ್ಯೋಷಕರ ತಲೆಗೂ ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆ ಬಗ್ಗೆ ವಿದ್ವತ್ ವಲಯದಲ್ಲಿ ಆಘಾತ ವ್ಯಕ್ತಪಡಿಸಿದೆ. ಭಾರತ ಮೂಲದ ಬ್ರಿಟನ್ ನಾಗರಿಕ ರಶ್ದಿಯವರ ಹಲವು ಲೇಖನಗಳು ವಿವಾದಕ್ಕೆ ಕಾರಣವಾಗಿವೆ. 1980ರ ದಶಕದಲ್ಲೇ ಅವರಿಗೆ ಕೊಲೆ ಬೆದರಿಕೆ ಇತ್ತು.'ದಿ ಸಟಾನಿಕ್ ವರ್ಸಸ್ (1988) ಪುಸ್ತಕ ಬಿಡುಗಡೆಯಾದಾಗ ಇರಾನ್ ಕಟ್ಟಾ ಮುಸ್ಲಿಮರು ರಶ್ದಿಯವರನ್ನು ಧರ್ಮದ್ರೋಹಿ ಎಂದು ಅವರ ವಿರುದ್ಧ ಫತ್ವಾ ಹೊರಡಿಸಿದ್ದರು. ಈ ಪುಸ್ತಕವನ್ನು ಇರಾನ್ ನಿಷೇಧಿಸಿತ್ತು. ರಶ್ದಿ ತಲೆಯನ್ನು ಕಡಿದು ತಂದವರಿಗೆ 3 ದಶಲಕ್ಷ ಡಾಲರ್ ಬಹುಮಾನವನ್ನು ಘೋಷಿಸಲಾಗಿತ್ತು. 1981 ರಲ್ಲಿ ಪ್ರಕಟವಾದ 'ಮಿಡ್ ನೈಟ್ ಚಿಲ್ಡ್ರನ್' ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟಿತು. 2007 ರಲ್ಲಿ ಅವರಿ ಬ್ರಿಟನ್ ಸರ್ಕಾರ ' ಸರ್ ' ಪದವಿ ನೀಡಿ ಗೌರವಿಸಿತು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article