-->

ಮಂಗಳೂರು ಏರ್ಪೋಟ್ ನಲ್ಲಿ‌ ಯುವಕ - ಯುವತಿಯ ಆ ಚ್ಯಾಟಿಂಗ್ ಗೆ ವಿಮಾನ ಸಂಚಾರವೇ ರದ್ದು

ಮಂಗಳೂರು ಏರ್ಪೋಟ್ ನಲ್ಲಿ‌ ಯುವಕ - ಯುವತಿಯ ಆ ಚ್ಯಾಟಿಂಗ್ ಗೆ ವಿಮಾನ ಸಂಚಾರವೇ ರದ್ದು

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕ - ಯುವತಿಯ ನಡುವಿನ ಚಾಟಿಂಗ್ ಗೆ ವಿಮಾನ ಯಾನವೇ ರದ್ದಾಗಿರುವ ಘಟನೆಯೊಂದು ಇಂದು ಮಧ್ಯಾಹ್ನ ‌ನಡೆದಿದೆ.

ಆ ಯುವಕ - ಯುವತಿಯ ವಾಟ್ಸ್ಆ್ಯಪ್ ಚಾಟಿಂಗ್ ವಿಮಾನ‌ ನಿಲ್ದಾಣದ ಭದ್ರತೆಗೆ ತೊಡಕಾಗಿದೆ ಎಂಬ ಆತಂಕದಿಂದ ಮುಂಬೈ ವಿಮಾನ ಯಾನವನ್ನೇ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ಮಾಡಲಾಗಿತ್ತು‌.‌ ಮುಂಬೈಗೆ ತೆರಳಬೇಕಾದ ಯುವಕ ಹಾಗೂ ಬೆಂಗಳೂರಿಗೆ ತೆರಳಬೇಕಾದ ಯುವತಿಯ ನಡುವೆ ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚ್ಯಾಟಿಂಗ್ ನಲ್ಲಿ ನಡೆಯುತ್ತಿತ್ತು. ಯುವಕ  ಮಾಡುತ್ತಿದ್ದ ಚ್ಯಾಟಿಂಗ್ ಅನ್ನು ಆತನ ಪಕ್ಕದಲ್ಲಿಯೇ ಇದ್ದ ಮತ್ತೋರ್ವ ಪ್ರಯಾಣಿಕ ಗಮನಿಸಿದ್ದಾರೆ. ಅದರಲ್ಲಿ ಆತಂಕಕ್ಕೀಡಾಗುವ ಆಕ್ಷೇಪಾರ್ಹ ಪದ ಬಳಕೆ ಇದೆಯೆಂದು ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ಮುಂಬೈ ವಿಮಾನ ಸಂಚಾರವನ್ನೇ ರದ್ದು ಮಾಡಿದ್ದಾರೆ. ಬಳಿಕ ವಿಮಾನವನ್ನು ತೀವ್ರ ತಪಾಸಣೆಗೊಳಪಡಿಸಿದ್ದಾರೆ. 

ಬಳಿಕ ಈ ಚ್ಯಾಟಿಂಗ್ ಗೂ ವಿಮಾನ ನಿಲ್ದಾಣದ ಭದ್ರತೆಗೆ ಯಾವುದೇ ತೊಂದರೆಯಿಲ್ಲವೆಂದು ವಿಮಾನ ಸಂಜೆ 5 ಗಂಟೆಗೆ ಮುಂಬೈ ಕಡೆಗೆ ಪ್ರಯಾಣ ಬೆಳೆಸಿದೆ. ಸದ್ಯ ಯುವಕ‌- ಯುವತಿ ಭದ್ರತಾ ಸಿಬ್ಬಂದಿ ವಶದಲ್ಲಿದ್ದಾರೆ.

Ads on article

Advertise in articles 1

advertising articles 2

Advertise under the article