-->
OP - Pixel Banner ad
ನಿಂತಿದ್ದ ಟ್ರಕ್ ಗೆ ಕಾರು ಢಿಕ್ಕಿ: ದುರ್ಮರಣಕ್ಕೀಡಾದ ತಿರುಪತಿ ಯಾತ್ರಿಗಳು

ನಿಂತಿದ್ದ ಟ್ರಕ್ ಗೆ ಕಾರು ಢಿಕ್ಕಿ: ದುರ್ಮರಣಕ್ಕೀಡಾದ ತಿರುಪತಿ ಯಾತ್ರಿಗಳು


ಆಂಧ್ರಪ್ರದೇಶ: ಇಲ್ಲಿನ ಪ್ರಕಾಶಂ ಜಿಲ್ಲೆಯ ಕಂಭಂ ಎಂಬಲ್ಲಿ ನಡೆದಿರುವ ಭೀಕರ ಅಪಘಾತಕ್ಕೆ ಐವರು ತಿರುಪತಿ ಯಾತ್ರಿಗಳು ದುರ್ಮರ್ಣಕ್ಕೀಡಾಗಿದ್ದಾರೆ.

ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್​ವೊಂದಕ್ಕೆ ಹಿಂಬದಿಯಿಂದ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮಾಚರ್ಲದಿಂದ ತಿರುಪತಿಗೆ ಹೋಗುತ್ತಿದ್ದ ಈ ತಿರುಪತಿ ಯಾತ್ರಿಗಳು ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ.

ಪಲ್ನಾಡು ಜಿಲ್ಲೆಯ ವೆಲ್ದುರ್ತಿ ತಾಲೂಕಿನ ಸಿರಿಗಿರಿಪಾಡು ನಿವಾಸಿಗಳಾದ ಅನಿಮಿ ರೆಡ್ಡಿ (60), ಗುರವಮ್ಮ (60), ಅನಂತಮ್ಮ (55), ಆದಿಲಕ್ಷ್ಮಿ (58) ಮತ್ತು ನಾಗಿರೆಡ್ಡಿ (24) ಮೃತಪಟ್ಟ ದುರ್ದೈವಿಗಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ನಿಂತ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜಾಗಿದೆ. ಈ ಅಪಘಾತ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.


Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242