-->

ಉತ್ತರಪ್ರದೇಶ: ಇನ್ನು ಕೆಲವೇ ಕ್ಷಣಗಳಲ್ಲಿ ಈ ಬೃಹತ್ ಅವಳಿ ಗೋಪುರ ಇತಿಹಾಸದ ಪುಟ ಸೇರಲಿದೆ; ಕೇವಲ‌ 12 ಸೆಕೆಂಡ್ ಗಳ ಕಾರ್ಯಾಚರಣೆ

ಉತ್ತರಪ್ರದೇಶ: ಇನ್ನು ಕೆಲವೇ ಕ್ಷಣಗಳಲ್ಲಿ ಈ ಬೃಹತ್ ಅವಳಿ ಗೋಪುರ ಇತಿಹಾಸದ ಪುಟ ಸೇರಲಿದೆ; ಕೇವಲ‌ 12 ಸೆಕೆಂಡ್ ಗಳ ಕಾರ್ಯಾಚರಣೆ

ನೋಯ್ಡಾ ( ಉತ್ತರ ಪ್ರದೇಶ ): ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಎಂಬ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬೃಹತ್ ಅವಳಿ ಗೋಪುರವಾದ ಈ ಕಟ್ಟಡಗಳು ಇನ್ನು ಕೆಲವೇ ಗಂಟೆಗಳಲ್ಲಿ ಇತಿಹಾಸದ ಪುಟ ಸೇರಲಿದೆ. 

ಹೌದು... 2004 ರಲ್ಲಿ ನಿರ್ಮಾಣವಾಗಿರುವ ಈ ಗೋಪುರದ ನಿರ್ಮಾಣ ಕಾರ್ಯಕ್ಕೆ ತಗುಲಿದ್ದು ಸುಮಾರು 70 ಕೋಟಿ ರೂ. ವರ್ಷಗಟ್ಟಲೆ ಸಮಯದಲ್ಲಿ ನಿರ್ಮಾಣ ಆಗಿರುವ ಈ ಕಟ್ಟಡ ಕೇವಲ 12 ಸೆಕೆಂಡ್‌ಗಳಲ್ಲಿ ಧರೆಗೆ ಉರುಳಲಿದೆ. ಈ ಕಟ್ಟಡ ಕೆಡವಲು ರವಿವಾರ ಮಧ್ಯಾಹ್ನ 2.30 ರ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಅಷ್ಟಕ್ಕೂ ಈ ಕಟ್ಟಡವನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕೆಡವಿ ಹಾಕಲಾಗುತ್ತದೆ. 

ಈ ಅವಳಿ ಕಟ್ಟಡಗಳಲ್ಲಿ ಒಂದು ಕಟ್ಟಡ 103 ಮೀಟರ್ ಹಾಗೂ ಇನ್ನೊಂದು 97 ಮೀಟರ್ ಎತ್ತರವಿದೆ. ಈ ಗೋಪುರದಲ್ಲಿ ಒಟ್ಟು 915 ಫ್ಲ್ಯಾಟ್‌ಗಳು, 20 ಕಮರ್ಷಿಯಲ್ ಅಂಗಡಿಗಳಿವೆ. ಈ ಗೋಪುರಗಳನ್ನು ಅಕ್ರಮವಾಗಿ ಕಟ್ಟಿರುವ ಕಾರಣಕ್ಕೆ ನೆಲಸಮ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ. ಸೂಪರ್ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿರುವ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆದೇಶಿಸಿತ್ತು.

ಇದಾಗಲೇ ಗೋಪುರ ನೆಲಸಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿಕೊಂಡಿದೆ. ನೆಲಸಮಕ್ಕಿಂತ ಮೊದಲಿನ ಪ್ರಕ್ರಿಯೆ ನಸುಕಿನಲ್ಲಿಯೇ ಶುರುವಾಗಿದೆ. ಈ ಕಾರ್ಯಾಚರಣೆಗೋಸ್ಕರ 3,700 ಕೆಜಿ ಸ್ಫೋಟಕ ಬಳಕೆ ಮಾಡಿಕೊಳ್ಳುತ್ತಿದೆ. ಎನ್‌ಡಿಆರ್‌ಎಫ್ , ಸಿಬಿಆರ್‌ಐ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿ ಹಾಜರು ಇರಲಿದ್ದಾರೆ . ಈ ಗೋಪುರಗಳ ಸುತ್ತಮುತ್ತ ಸುಮಾರು 7 ಸಾವಿರ ಜನರು ವಾಸವಾಗಿದ್ದು , ಇದಾಗಲೇ ಅವರನ್ನು ಸ್ಥಳಾಂತರ ಮಾಡಲಾಗಿದೆ . ಸಂಜೆ 5 ಗಂಟೆಗೆ ಎಲ್ಲ ಸೇವೆ ಪುನಾರಂಭಗೊಳ್ಳಲಿವೆ . ನಂತರ ಎಲ್ಲ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದು ಎಂದು ಸೂಚನೆ ನೀಡಲಾಗಿದೆ . ಪ್ರದೇಶದಲ್ಲಿ ವಿದ್ಯುತ್ , ಅನಿಲ್ ಸೇರಿದಂತೆ ಎಲ್ಲ ಸೇವೆಗಳ ಬಂದ್ ಆಗಿವೆ. 

Ads on article

Advertise in articles 1

advertising articles 2

Advertise under the article