ಆಫೀಸ್ ಮೀಟಿಂಗ್ ಎಂದು ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿಯೊಂದಿಗೆ ಮಾಲ್ಡೀವ್ಸ್ ಗೆ ಹಾರಿದ ಇಂಜಿನಿಯರ್: ಈತ ಜೈಲು ಸೇರಿದ್ದೇಕೆ?
Sunday, July 10, 2022
ಮುಂಬೈ: ಆಫೀಸ್ ಮೀಟಿಂಗ್ ನಾಲ್ಕೈದು ದಿನ ಬರಲಾಗೋದಿಲ್ಲ ಎಂದು ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿಯೊಂದಿಗೆ ಮಾಲ್ಡೀವ್ಸ್ ಗೆ ಹಾರಿದ ಇಂಜಿನಿಯರ್ ಇದೀಗ ಪೊಲೀಸ್ ಅತಿಥಿಯಾಗಿರುವ ಘಟನೆ ನಡೆದಿದೆ.
ಪ್ರಿಯಾಂಕರ ನೋರ್ವಾ ಎಂಬ ಇಂಜಿನಿಯರ್ ಇಂತಹ ಘನಂಧಾರಿ ಕೆಲಸ ಮಾಡಿದವನು. ಅಷ್ಟಕ್ಕೂ ಈತ ಪೊಲೀಸ್ ಅತಿಥಿಯಾಗಿರುವುದಕ್ಕೆ ಎಂದರೆ, ತಾನು ಪತ್ನಿ ಕೈಗೆ ಸಿಕ್ಕಿ ಬೀಳುತ್ತೇನೆಂದು ಹೆದರಿ ಈತ ಮಾಲ್ಡೀವ್ಸ್‌ಗೆ ಹಾರಿರುವ ಪಾಸ್ ಪೋರ್ಟ್ ಹಾಳೆಯನ್ನೇ ಹರಿದಿದ್ದಾನೆ. ಆದರೆ ಮಾಲ್ಡೀವ್ಸ್ ನಿಂದ ಹಿಂದಿರುಗಿದ ಆತನ ಪಾಸ್ ಪೋರ್ಟ್ ನಲ್ಲಿ ಕೆಲ ಹಾಳೆ ಹರಿದಿರುವುದು ನೋಡಿ ಅನುಮಾನಗೊಂಡು ಅಧಿಕಾರಿಗಳು ವಿಚಾರಿಸಿದ್ದಾರೆ. ಆದರೆ ಹೇಳಲು ಆತ ತಡವರಿಸಿದ್ದಾನೆ. ತಕ್ಷಣ ಮುಂಬೈ ಪೊಲೀಸರು ವಂಚನೆ ಹಾಗೂ ಪೋರ್ಜರಿ ಪ್ರಕರಣದಡಿ ಆತನನ್ನು ಜೈಲಿಗಟ್ಟಿದ್ದಾರೆ.
ಬಳಿಕ ವಿಧಿಯಿಲ್ಲದೆ ಇಂಜಿನಿಯರ್ ಪತ್ನಿಯಿಂದ ವಿಚಾರ ಮರೆ ಮಾಚಲು ಪಾಸ್ ಪೋರ್ಟ್ ಹಾಳೆ ಹರಿದಿರುವುದಾಗಿ ಸತ್ಯ ಬಾಯಿಬಿಟ್ಟಿದ್ದಾನೆ. ಈತ ತನಗೆ ಪಾಸ್ ಪೋರ್ಟ್ ಹಾಳೆ ಹರಿದು ಹಾಕೋದು ಅಪರಾಧವೆಂದು ತಿಳಿದಿರಲಿಲ್ಲ. ಹಾಗಾಗಿ ಪತ್ನಿಯಿಂದ ವಿಷಯ ಮರೆ ಮಾಡಲು ಈ ರೀತಿ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ. ಈ ಬಗ್ಗೆ ವಿಚಾರಣೆ ಮುಂದುವರಿದಿದೆ.
ಅಷ್ಟಕ್ಕೂ ಆತ ಪಾಸ್ ಪೋರ್ಟ್ ಹಾಳೆ ಹರಿದು ಹಾಕಲು ಪತ್ನಿಗೆ ಆತನ ಮೇಲೆ ಅನುಮಾನ ಮೂಡಿರೋದೆ ಕಾರಣವಂತೆ. ಈತನ ಮೇಲೆ ಅನುಮಾನ ಮೂಡಿದ ಪತ್ನಿ ಈತನಿಗೆ ಕರೆ ಮಾಡಿದ್ದಾಳೆ. ಆದರೆ ಆತ ರಿಸೀವ್ ಮಾಡಿರಲಿಲ್ಲ. ಇದರಿಂದ ಪದೇ ಪದೇ ಆಕೆ ವಾಟ್ಸ್ಆ್ಯಪ್ ವೀಡಿಯೋ ಕರೆ ಮಾಡಿದ್ದಾಳೆ. ಪರಿಣಾಮ ಗಾಬರಿಗೊಂಡ ಆತ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರಟು ಬಂದಿದ್ದಾನೆ. ಆದರೆ ಇಷ್ಟೆಲ್ಲಾ ಮಾಡಿರುವ ಪತ್ನಿ ಪಾಸ್ ಪೋರ್ಟ್ ನೋಡದೆ ಬಿಡುತ್ತಾಳೆಯೇ ಎಂದು ಅದಕ್ಕಾಗಿ ಮಾಲ್ಡೀವ್ಸ್ ಪ್ರವಾಸದ ಪೇಪರ್ ಅನ್ನೇ ಹರಿದು ಹಾಕಿದ್ದಾನೆ. ಇದರಿಂದ ಈ ಎಲ್ಲಾ ಎಡವಟ್ಟು ಆಗಿದೆ.