-->

Health Tips: ಗ್ಯಾಸ್ಟ್ರಿಕ್ ಎಂದರೇನು...? ಹೇಗೆ ಬರುತ್ತದೆ... ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರವೇ...?

Health Tips: ಗ್ಯಾಸ್ಟ್ರಿಕ್ ಎಂದರೇನು...? ಹೇಗೆ ಬರುತ್ತದೆ... ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರವೇ...?

Health Tips: ಗ್ಯಾಸ್ಟ್ರಿಕ್ ಎಂದರೇನು...? ಹೇಗೆ ಬರುತ್ತದೆ... ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರವೇ...?






ಈಗೀಗ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವುದು ಮಾಮೂಲು... ಮಕ್ಕಳು, ಯುವಕರು, ದೊಡ್ಡವರು ಹೀಗೆ ಗ್ಯಾಸ್ಟ್ರಿಕ್ ಬಾಧೇ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಈ ಸಮಸ್ಯೆಗೆ ಮುಖ್ಯ ಕಾರಣ ತಾವು ತಿನ್ನುವ ಅಹಾರ... ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಅನಾರೋಗ್ಯಕರ ಅಂಶ ಇರುತ್ತದೆ. ಇದು ವಿಪರೀತ ಮಟ್ಟಕ್ಕೆ ಹೋದಾಗ ಗ್ಯಾಸ್ಟ್ರಿಕ್, ಎದೆಯುರಿ ಅನುಭವ ಆಗುತ್ತದೆ.




ಬಹುತೇಕರಿಗೆ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಏಕೆಂದರೆ, ಇದೇ ಸಮಸ್ಯೆ ಮುಂದೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುವ ಸಂಭವ ಜಾಸ್ತಿ ಇರುತ್ತದೆ. ಉದಾ: ತಿಂದ ಆಹಾರ ಸರಿಯಾಗಿ ಪಚನವಾಗದೇ ಇರುವುದು, ಮಲಬದ್ಧತೆ.. ಇತ್ಯಾದಿ




ಗ್ಯಾಸ್ಟ್ರಿಕ್ ಜೊತೆಗೆ ಎದೆಯುರಿ, ವಾಕರಿಕೆ, ವಾಂತಿ ಬರಬಹುದು... ಆಗ ಮನಗೆ ನೆನಪಾಗುವುದು ಕೆಲವೊಂದು ಮಾತ್ರೆಗಳು.. ಪ್ರತಿಬಾರಿ ಈ ಸಮಸ್ಯೆ ಉಂಟಾದಾಗ ಮಾತ್ರೆಯನ್ನೇ ನೆಚ್ಚಿಕೊಳ್ಳುವುದು ಅಪಾಯಕಾರಿ. ಇದರಿಂದ ನಮ್ಮ ಆರೋಗ್ಯಕ್ಕೆ ಗಂಭೀರ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ...




ಹೆಚ್ಚು ಮಾತ್ರೆ ತೆಗೆದುಕೊಳ್ಳಬಾರದು...

ತಜ್ಞರ ಅಭಿಪ್ರಾಯದ ಪ್ರಕಾರ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗ ಸಾಧ್ಯವಾದಷ್ಟು ಮನೆ ಮದ್ದು ಬಳಸಿ ಸಮಸ್ಯೆಯನ್ನು ನಿವಾರಿಸಬೇಕು... ಮಾತ್ರೆಗಳ ಮೇಲಿನ ಅವಲಂಬನೆ ಭವಿಷ್ಯದಲ್ಲಿ ದುಬಾರಿಯಾಗಿ ಪರಿಣಮಿಸಬಹುದು.... ಕೆಲವರಿಗೆ ಈ ಮಾತ್ರೆ, ಸಿರಪ್, ಔಷಧಿಗಳ ಸೇವನೆಯಿಂದ ಸೈಡ್ ಎಫೆಕ್ಟ್‌ ಉಂಟಾಗಬಹುದು... ಕಿಡ್ನಿ, ಲಿವರ್ ಸಮಸ್ಯೆ ಉಂಟಾಗುವ ಸಂಭವ ಜಾಸ್ತಿ ಇರುತ್ತದೆ..



ಹಾಗೆಂದು, ಈ ಗ್ಯಾಸ್ಟ್ರಿಕ್ ಬಾಧೆಯನ್ನು ಹಾಗೆ ಬಿಟ್ಟರೆ ಸಮಸ್ಯೆ ಕಟ್ಟಿಟ್ಟ ಬುತ್ತಿ! ನೈಸರ್ಗಿಕ ವಿಧಾನದಲ್ಲೇ ಇದನ್ನು ಪರಿಹರಿಸುವ ಪ್ರಯತ್ನ ಮಾಡಿದರೆ ಒಳ್ಳೆಯದು... ಎಳನೀರನ್ನು ಕುಡಿಯುವ ಮೂಲಕ ಗ್ಯಾಸ್ಟ್ರಿಕ್ ಬಾಧೆಯನ್ನು ನಿವಾರಿಸಬಹುದು...



ಎಳನೀರು: ಇದರಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೇಸಿಗೆ ಕಾಲದಲ್ಲಿ ಮಾತ್ರ ಎಳನೀರು ಕುಡಿದರೆ ಒಳ್ಳೆಯದು ಎಂದು ಹೆಚ್ಚಿನವರ ತಿಳುವಳಿಕೆ... ಚಳಿಗಾಲದಲ್ಲೂ ಎಳನೀರು ಕುಡಿಯಬಹುದು. ಅದರೆ, ಶೀತ, ನೆಗಡಿಯಂತಹ ಸಮಸ್ಯೆ ಇದ್ದರೆ ಎಳನೀರು ಸೇವನೆ ಬೇಡ. ಎಳನೀರಿನಲ್ಲಿ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ನಿವಾರಣೆಯಾಗುತ್ತದೆ..



ಒಂದು ಅಧ್ಯಯನದ ಪ್ರಕಾರ, ಹಣ್ಣಿನ ಜ್ಯೂಸ್‌ಗಿಂತಲೂ ಎಳನೀರು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ... ಅಂತರ್ಜಲದಿಂದಲೇ ಸೃಷ್ಟಿಯಾದ, ಪ್ರಾಕೃತಿಕ ಸಂಪದ್ಭರಿತ ಜಲವನ್ನು ಹೀರಿ, ಸೊಂಪಾಗಿ ಬೆಳೆದ ತೆಂಗಿನ ಮರ ನಮಗಾಗಿ ನೀಡುವ ಕಲ್ಪವೃಕ್ಷ... ಇದು ಒಂದು ಅತ್ಯದ್ಭುತ ರುಚಿಕರವಾದ ನೈಸರ್ಗಿಕ ಪೇಯ...



ಪುರಾಣದಲ್ಲಿ ಎಳನೀರನ್ನು ಅಮೃತಕ್ಕೆ ಹೋಲಿಸಲಾಗಿದೆ. ಜ್ವರ, ಶೀತದಿಂದ ಬಳಲುವವರನ್ನು ಹೊರತುಪಡಿಸಿ ಎಲ್ಲ ವಯೋವರ್ಗದವರು ಎಳನೀರು ಕುಡಿಯಬಹುದು... ಹಾಗೂ ಇದರಿಂದ ಅವರಿಗೆ ಸಾಕಷ್ಟು ಪ್ರಯೋಜನಗಳಿವೆ.



ಹೊಟ್ಟೆ ತುಂಬಾ ಊಟ ಮಾಡಿದರೆ, ಅಥವಾ ಗ್ಯಾಸ್ಟ್ರಿಕ್ ಉಂಟು ಮಾಡುವಂತಹ ತರಕಾರಿಗಳನ್ನು ಸೇವಿಸಿದಾಗ ಅಥವಾ ಕೆಲವೊಮ್ಮೆ ಶೀತ, ನೆಗಡಿ ಉಂಟಾದಾಗ ಮಾತ್ರೆಗಳನ್ನು ನುಂಗಿದಾಗ, ಇವುಗಳ ಅಡ್ಡ ಪರಿಣಾಮಗಳಿಂದಾಗಿ, ಕೆಲವೊಮ್ಮೆ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಆಗ ಎಳನೀರು ಉಪಯೋಗಕ್ಕೆ ಬರುತ್ತದೆ.


ಎಳನೀರಿನಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಬಗೆಹರಿದು, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿವಾರಣೆ ಅಗುತ್ತದೆ. ಯಾವುದೇ ವಯಸ್ಸಿನವರು ನಿಯಮಿತವಾಗಿ ಎಳನೀರು ಕುಡಿಯಬಹುದು. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article