ವಿಜಯಪುರ: ಕಟ್ಟಿಗೆ ತರಲೆಂದು ಹೋದ ತಾಯಿ - ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ

ವಿಜಯಪುರ: ಬಾವಿಗೆ ಬಿದ್ದು, ತಾಯಿ - ಮಕ್ಕಳಿಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಝಳಕಿಯಲ್ಲಿ ನಡೆದಿದೆ.

ಝಳಕಿ ನಿವಾಸಿ ಶ್ರೀದೇವಿ ಸಂತೋಷ ಬಿರಾದರ್(31), ಆಕೆಯ ಮಕ್ಕಳಾದ ಶ್ರೀಶೈಲ(7) ಹಾಗೂ ಮಹೇಶ(5) ಮೃತಪಟ್ಟ ದುರ್ದೈವಿಗಳು. 

ತಾಯಿ ಹಾಗೂ ಮಕ್ಕಳಿಬ್ಬರು ಝಳಕಿ ಸಮೀಪದ ಶಿರನಾಳನಲ್ಲಿನ ತೋಟಕ್ಕೆ ಕಟ್ಟಿಗೆ ತರಲೆಂದು ತೋಟಕ್ಕೆ ಹೋಗಿದ್ದರು. ಆದರೆ ಅವರ ಮೃತದೇಹವು ಬಾವಿಯೊಂದರಲ್ಲಿ ಪತ್ತೆಯಾಗಿದೆ. ಅವರು ಕಾಲುಜಾರಿ ಬಿದ್ದಿದ್ದಾರೋ, ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಝಳಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu