ಉಳ್ಳಾಲ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನ ಮೃತದೇಹ ಕೋಟೆಪುರದಲ್ಲಿ ಪತ್ತೆ!
Wednesday, July 6, 2022
ಉಳ್ಳಾಲ: ಇಲ್ಲಿನ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ರವಿವಾರ
ಸಂಜೆ ಈಜಲು ಹೋಗಿ ನೀರುಪಾಲಾಗಿದ್ದ ಯುವಕ ಅಶ್ವಿತ್(19) ಮೃತದೇಹ ಇಂದು ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಸಜಿಪಪಡುವಿನ ತಲೆಮೊಗರು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ರವಿವಾರ ನಾಮಕರಣ ಶಾಸ್ತ್ರ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಬಂದಿದ್ದ ಅಶ್ವಿತ್ ಗಾಣಿಗ ಸ್ನೇಹಿತರು ಸಂಬಂಧಿಕ ಯುವಕರೊಂದಿಗೆ ಸಮೀಪದ ನೇತ್ರಾವತಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ಅಶ್ವಿತ್ ಹಾಗೂ ಹರ್ಷ ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜತೆಯಲ್ಲಿದ್ದ ಯುವಕರು ಹರ್ಷನನ್ನು ರಕ್ಷಿಸಿ ಮೇಲಕ್ಕೆತ್ತಿದ್ದರು. ಆದತೆ ಅಶ್ವಿತ್ ನಾಪತ್ತೆಯಾಗಿದ್ದರು.
ಸತತ ಮೂರು ದಿನಗಳಿಂದ ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಹುಡುಕಾಟವನ್ನು ನಡೆಸಲಾಗಿದ್ದು, ಬುಧವಾರ ಅಶ್ವಿತ್ ಗಾಣಿಗ ಮೃತದೇಹ ಪತ್ತೆಯಾಗಿದೆ.