ಕುಂದಾಪುರ: ಮರವಂತೆ ಬೀಚ್ ನಲ್ಲಿ ಸಮುದ್ರಪಾಲಾದ ಯುವಕನ ಮೃತದೇಹ ಪತ್ತೆ
Monday, July 4, 2022
ಕುಂದಾಪುರ: ಕಾರು ಪಲ್ಟಿಯಾಗಿ ಮರವಂತೆ ಸಮುದ್ರದಲ್ಲಿ ಮುಳುಗಿದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಯುವಕ ರೋಶನ್ ಆಚಾರ್ಯ(24)ನ ಮೃತದೇಹ ಕಂಚಿಗೋಡು ತ್ರಾಸಿಯಲ್ಲಿ ಪತ್ತೆಯಾಗಿದೆ.
ರವಿವಾರ ಇವರಿದ್ದ ಕಾರು ಹೆದ್ದಾರಿಯಲ್ಲಿ ಪಲ್ಟಿಯಾಗಿ ಮರವಂತೆಯಲ್ಲಿ ಸಮುದ್ರಕ್ಕೆ ಬಿದ್ದಿತ್ತು. ಪರಿಣಾಮ ಕಾರು ಚಲಾಯಿಸುತ್ತಿದ್ದ ಬೀಜಾಡಿ ನಿವಾಸಿ ವಿರಾಜ್ ಆಚಾರ್ಯ ಮೃತಪಟ್ಟಿದ್ದರು. ಉಳಿದ ಇಬ್ಬರು ಪಾರಾಗಿದ್ದರು. ಆದರೆ ರೋಶನ್ ಆಚಾರ್ಯ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಆದರೆ ಇಂದು ಅವರು ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಅಪಘಾತದ ಸಂದರ್ಭ ರೋಶನ್ ಆಚಾರ್ಯ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದರು. ರವಿವಾರ ಬೆಳಗ್ಗಿನಿಂದ ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ಅವರು ಎಲ್ಲೂ ಪತ್ತೆಯಾಗದ ಕಾರಣ ರಾತ್ರಿ ವೇಳೆ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇಂದು ಶೋಧ ಕಾರ್ಯ ಮುಂದುವರಿಸಲಾಗಿತ್ತು. ಆದರೆ ಇಂದು ಅವರು ಮೃತದೇಹವಾಗಿ ಕಂಚುಗೋಡು ತ್ರಾಸಿಯಲ್ಲಿ ಪತ್ತೆಯಾಗಿದ್ದಾರೆ.