ಕುಂದಾಪುರ: ಇಲ್ಲಿನ ಮರವಂತೆಯಲ್ಲಿ ಕಾರೊಂದು ಸಮುದ್ರಕ್ಕೆ ಉರುಳಿ ಬಿದ್ದು ಭಾರೀ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು ಮತ್ತೋರ್ವ ನಾಪತ್ತೆಯಾಗಿದ್ದಾನೆ.
ಕುಂದಾಪುರ ನಿವಾಸಿ ವಿರಾಜ್ ಆಚಾರ್(28) ಮೃತಪಟ್ಟ ದುರ್ದೈವಿ. ರೋಶನ್ ನಾಪತ್ತೆಯಾಗಿದ್ದಾರೆ. ಕಾರ್ತಿಕ್ ಹಾಗೂ ಸಂದೇಶ್ ಎಂಬವರು ಪಾರಾಗಿದ್ದು, ಇವರು ಘಟನೆಯಿಂದ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ತಡರಾತ್ರಿ ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಕಾರು ಉರುಳಿ ಸಮುದ್ರಕ್ಕೆ ಬಿದ್ದಿದೆ. ಈ ದುರ್ಘಟನೆ ನಡೆದ ಕಾರಿನಲ್ಲಿ ನಾಲ್ವರು ಇದ್ದು, ಓರ್ವ ಮೃತಪಟ್ಟಿದ್ದರೆ ಮತ್ತೋರ್ವ ನಾಪತ್ತೆಯಾಗಿದ್ದಾನೆ. ಉಳಿದ ಇಬ್ಬರು ಪಾರಾಗಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞರು ಸ್ಥಳಕ್ಕೆ ದೌಢಾಯಿಸಿ ಕಾರನ್ನು ಮೇಲೆತ್ತುವ ಕಾರ್ಯಾಚರಣೆ ಕೈಗೊಂಡಿದೆ. ಗಂಗೊಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ