
ಈ ಉಳಿತಾಯ ಯೋಜನೆಯಲ್ಲಿ ಹಣ ಹೂಡಿದರೆ ಭರ್ಜರಿ ಲಾಭ: ಇದೆಂಥಾ ಸೂಪರ್ ಯೋಜನೆ ಗೊತ್ತಾ..!?
ಈ ಉಳಿತಾಯ ಯೋಜನೆಯಲ್ಲಿ ಹಣ ಹೂಡಿದರೆ ಭರ್ಜರಿ ಲಾಭ: ಇದೆಂಥಾ ಸೂಪರ್ ಯೋಜನೆ ಗೊತ್ತಾ..!?
ಅಂಚೆ ಕಚೇರಿಯ M.I.S. Scheme: ಈ ಯೋಜನೆಯಲ್ಲಿ, ನೀವು ಇರಿಸಿರುವ ಠೇವಣಿಯನ್ನು ಐದು ವರ್ಷಗಳ ನಂತರ ಹಿಂತಿರುಗಿಸಲಾಗುತ್ತದೆ ಇಲ್ಲವೇ ಪಿಂಚಣಿಯ ರೂಪದಲ್ಲಿ ಬಡ್ಡಿಯನ್ನು ಪಡೆಯಬಹುದು.
ಇದೊಂದು ಅಂಚೆ ಕಚೇರಿಯ ಈ ಸೂಪರ್ ಹಿಟ್ ಯೋಜನೆ. ಇದರ ಪ್ರಕಾರ, ನೀವು ಕೇವಲ ಒಮ್ಮೆ ಮಾತ್ರ ಹಣ ಹೂಡಿಕೆ ಮಾಡಿ, ತಿಂಗಳಿಗೆ ಪಿಂಚಣಿಯ ರೂಪದಲ್ಲಿ ಬಡ್ಡಿಯನ್ನು ಪಡೆಯಬಹುದು. ಇದರಲ್ಲಿದೆ ಹಲವು ಲಾಭಗಳು... ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ...
ಅಂಚೆ ಕಚೇರಿಯ M.I.S. Scheme: ಸಾಮಾನ್ಯವಾಗಿ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಕೋನದಿಂದ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಅಂಚೆ ಕಚೇರಿ ಕೂಡ ಕೂಡ ತನ್ನ ಗ್ರಾಹಕರಿಗಾಗಿ ಆಗಾಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.
ಇದೀಗ ನಾವು ನಿಮಗೆ ಅಂಚೆ ಕಚೇರಿಯ ಅಂತಹ ಒಂದು ಉತ್ಕೃಷ್ಟ ಯೋಜನೆಯ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.. ಈ ಯೋಜನೆಯಡಿ ನೀವು ಒಮ್ಮೆ ಮಾತ್ರ ಹಣವನ್ನು ಹೂಡಿಕೆ ಮಾಡಿ ನಂತರ ಪಿಂಚಣಿಯ ರೂಪದಲ್ಲಿ ಅದರ ಬಡ್ಡಿಯನ್ನು ಪಡೆಯಬಹುದು. ಯೋಜನೆಯ ಪರಿಪಕ್ವತೆಯ ಬಳಿಕ ನೀವು ಹೂಡಿಕೆ ಮಾಡಿರುವ ಎಲ್ಲಾ ಹಣ ನಿಮಗೆ ವಾಪಸ್ ಸಿಗಲಿದೆ.
ಆ ಯೋಜನೆ ಯಾವುದು ?
ಅಂಚೆ ಕಚೇರಿಯ ಈ ಯೋಜನೆಯ ಹೆಸರು "ಪೋಸ್ಟ್ ಆಫೀಸ್ ಮಂಥ್ಲಿ ಇನ್ಕಮ್ ಸ್ಕೀಮ್". ಈ M.I.S. ಯೋಜನೆಯಡಿ ಕನಿಷ್ಠ ರೂ.1000/- ಹಾಗೂ ಆ ಮೇಲೆ 100/-ರ ಗುಣಕದಲ್ಲಿ ನಿಮಗೆ ಇಷ್ಟವಾದಷ್ಟು ಹಣವನ್ನು ಇನ್‌ವೆಸ್ಟ್ ಮಾಡಬಹುದು.
-ಗರಿಷ್ಠ ಅಂದರೆ 4.5 ಲಕ್ಷ ರೂ. ಹೂಡಿಕೆಯನ್ನು ಈ ಯೋಜನೆಯ ಅಡಿ ಮಾಡಬಹುದು. ಇದು ಕೇವಲ ಸಿಂಗಲ್ ಅಕೌಂಟ್ ಗಾಗಿ ಇರುವ ಮಿತಿ ಆಗಿದೆ. ಒಂದು ವೇಳೆ, ಜಂಟಿ ಖಾತೆ ಆಗಿದ್ದರೆ, ಗರಿಷ್ಠ ಮಿತಿ 9 ಲಕ್ಷ ರೂ.ಗಳಾಗಿದೆ. ಆದರೆ, ಗರಿಷ್ಟ ಅಂದರೆ 3 ಜನರು ಸೇರಿ ಜಂಟಿ ಖಾತೆಯನ್ನು ತೆರೆಯಬಹುದು.
ಈ ಯೋಜನೆಯಲ್ಲಿ, ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ. 10 ವರ್ಷದ ಮಗುವಿನ ಹೆಸರಿನಲ್ಲಿಯೂ ಕೂಡ ಅಂಚೆ ಕಚೇರಿಯಲ್ಲಿ M.I.S. ಖಾತೆಯನ್ನು ತೆರೆಯಬಹುದು.
ಯೋಜನೆಯಡಿ ಬರುವ ಬಡ್ಡಿ ಎಷ್ಟು ಗೊತ್ತೇ..?
M.I.S. ಯೋಜನೆಯ ಅಡಿ ಮಾಸಿಕ ಆಧಾರದ ಮೇಲೆ ಹಣ ಪಾವತಿಸಲಾಗುತ್ತದೆ. ಸದ್ಯಕ್ಕೆ ಈಗ ಒಂದು ಖಾತೆಯ ಬ್ಯಾಲೆನ್ಸ್ ಮೇಲೆ ಶೇ.6.6ರಷ್ಟು ಬಡ್ಡಿಯನ್ನು ಪಾವತಿಸಲಾಗುತ್ತಿದೆ ಮತ್ತು ಇದು ಸರಳ ಬಡ್ಡಿಯಾಗಿದೆ.
ಒಂದು ವೇಳೆ ಗ್ರಾಹಕರು ಮಾಸಿಕ ಆಧಾರದ ಮೇಲೆ ಈ ಬಡ್ಡಿಯನ್ನು ಪಡೆಯದೇ ಹೋದರೆ, ಆ ಹಣದ ಮೇಲೆ ಹೆಚ್ಚುವರಿ ಬಡ್ಡಿಯ ಲಾಭ ಸಿಗುವುದಿಲ್ಲ.
M.I.S. ಯೋಜನೆಯ ಗರಿಷ್ಠ ಅವಧಿ ಐದು ವರ್ಷಗಳು. ಅಂಚೆ ಕಚೇರಿಯ ಈ ಮಹತ್ವಾಕಾಂಕ್ಷಿ ಸ್ಕೀಂನ ಮೆಚುರಿಟಿ ಅವಧಿ ಐದು ವರ್ಷಗಳು. ಆದರೆ, ನೀವು ಖಾತೆ ತೆರೆದ ಒಂದು ವರ್ಷದವರೆಗೆ ಸ್ಕೀಂನಿಂದ ಹಣ ವಿತ್‌ಡ್ರಾ ಮಾಡುವ ಹಾಗಿಲ್ಲ.
ಒಂದು ವೇಳೆ, ನೀವು ಒಂದು ವರ್ಷದಿಂದ ಮೂರು ವರ್ಷದ ಮಧ್ಯೆ, ಯೋಜನೆಯಿಂದ ವಾಪಸ್ ಹೋಗುವುದಿದ್ದರೆ, ಒಟ್ಟು ಮೂಲ ಮೊತ್ತದಿಂದ ಶೇ.2 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.
ಇನ್ನೊಂದೆಡೆ 3-5 ವರ್ಷದ ಒಳಗೆ ನೀವು ಹಣವನ್ನು ಹಿಂಪಡೆಯಲು ಬಯಸಿದರೆ, ನಿಮ್ಮ ಒಟ್ಟು ಹಣದಿಂದ ಶೇ. 1 ರಷ್ಟು ಕಡಿತಗೊಳಿಸಲಾಗುತ್ತದೆ.
4.5 ಲಕ್ಷ ರೂ. ಠೇವಣಿ ಇರಿಸಿದರೆ ತಿಂಗಳಿಗೆ 2475 ಪಡೆಯಬಹುದು
M.I.S. ಲೆಕ್ಕಾಚಾರದ ಪ್ರಕಾರ, ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಏಕಕಾಲಕ್ಕೆ ರೂ 50 ಸಾವಿರ ಠೇವಣಿ ಇರಿಸಿದರೆ, ತಿಂಗಳಿಗೆ ರೂ.275 ರಂತೆ ವಾರ್ಷಿಕವಾಗಿ 3300 ರೂ.ಗಳನ್ನು ಐದು ವರ್ಷಗಳವರೆಗೆ ಪಡೆಯಬಹುದು.
ಅಂದರೆ, ಐದು ವರ್ಷಗಳಲ್ಲಿ ನೀವು ಒಟ್ಟು 16,500 ರೂ. ಪಡೆಯಬಹುದು. ಇದೆ ರೀತಿ ನೀವು ಈ ಯೋಜನೆಯ ಅಡಿ ಗರಿಷ್ಟ 4.5 ಲಕ್ಷ ರೂ.ಠೇವಣಿ ಇರಿಸಿದರೆ, ವಾರ್ಷಿಕವಾಗಿ ನೀವು 29,700 ರೂ.ರಂತೆ ಐದು ವರ್ಷಗಳಲ್ಲಿ ಬಡ್ಡಿ ರೂಪದಲ್ಲಿ ಒಟ್ಟು 148500 ರೂ. ಪಡೆಯಬಹುದು.
ಮೆಚುರಿಟಿ ಅವಧಿಯಲ್ಲಿ ಖಾತೆದಾರರ ಸಾವನ್ನಪ್ಪಿದರೆ, ಅವರ ನಾಮನಿರ್ದೇಶಿತ ವ್ಯಕ್ತಿಗೆ ಒಟ್ಟು ಮೂಲ ಹಣವನ್ನು ಪೂರ್ತಿಯಾಗಿ ನೀಡಲಾಗುತ್ತದೆ. ಅಲ್ಲದೆ, ಯೋಜನೆಯಲ್ಲಿ ಇರಿಸಲಾಗಿರುವ ಠೇವಣಿ 80ಸಿ ಅಡಿ ಆದಾಯ ತೆರಿಗೆ ವಿನಾಯಿತಿ ಲಾಭ ಸಿಗುತ್ತದೆ.
ಪೋಸ್ಟ್ ಆಫೀಸ್ ನಿಂದ ಹಿಂಪಡೆದ ಹಣಕ್ಕೆ 'ಮೂಲದಿಂದ ತೆರಿಗೆ ಕಡಿತ' TDS ಬರುವುದಿಲ್ಲ. ಆದರೆ, ಯೋಜನೆಯ ಬಡ್ಡಿ ಮಾತ್ರ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ.