-->
ಮಂಗಳೂರು ವಿವಿ ಕಾಲೇಜಿನಲ್ಲಿ ಸಾವರ್ಕರ್ ಪೋಟೊ ಅಳವಡಿಕೆ: ಎರಡು ತಂಡಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಮಂಗಳೂರು ವಿವಿ ಕಾಲೇಜಿನಲ್ಲಿ ಸಾವರ್ಕರ್ ಪೋಟೊ ಅಳವಡಿಕೆ: ಎರಡು ತಂಡಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಮಂಗಳೂರು: ನಗರದಲ್ಲಿ ಮಂಗಳೂರಿನ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಸಾವರ್ಕರ್ ಪೋಟೊ ಅಳವಡಿಕೆ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕೈಕೈ ಮಿಲಾಯಿಸಿಕೊಂಡಿದ್ದಾರೆ.


3-4 ದಿನಗಳ ಹಿಂದೆ ಕಾಲೇಜು ಕೊಠಡಿಯ ಬೋರ್ಡ್ ಮೇಲೆ ಸಾವರ್ಕರ್ ಪೋಟೊವವನ್ನು ವಿದ್ಯಾರ್ಥಿಯೊಬ್ಬ ಅಳವಡಿಸಿರುವ ವೀಡಿಯೊ ವೈರಲ್ ಆಗಿತ್ತು. ಇದು ಗಮನಕ್ಕೆ ಬಂದ ತಕ್ಷಣ ಪ್ರಾಂಶುಪಾಲೆ ಡಾ.ಅನುಸೂಯ ರೈಯವರು ಈ ಪೋಟೋವನ್ನು ತೆಗೆಸಿದ್ದರು. ಈ ವಿಚಾರದಲ್ಲಿ ಇಂದು ಮಧ್ಯಾಹ್ನ ವಿದ್ಯಾರ್ಥಿಗಳ ‌ಎರಡು ಗುಂಪುಗಳ ನಡುವೆ ವಾದ-ವಿವಾದ ನಡೆದಿದೆ‌. ಬಳಿಕ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article