
ವಿಮಾನ ಸಿಬ್ಬಂದಿಯ ದುರ್ವತನೆ ಬಗ್ಗೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ ಸೌತ್ ಬ್ಯೂಟಿ ಪೂಜಾ ಹೆಗ್ಡೆ
6/09/2022 07:43:00 PM
ಮುಂಬೈ: ಇಂಡಿಗೋ ವಿಮಾನ ಸಿಬ್ಬಂದಿಯೋರ್ವರು ತಮ್ಮೊಂದಿಗೆ ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆಂದು ಸೌತ್ ಇಂಡಿಯಾ ಸಿನಿಮಾ ಬೆಡಗಿ ಪೂಜಾ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಗೋ ವಿಮಾನ ಸಿಬ್ಬಂದಿ ವಿಪುಲ್ ನಕಾಶೆ ಎಂಬಾತ ವಿಮಾನದೊಳಗೆ ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ. ಈತ ಕಾರಣವಿಲ್ಲದೆ ಬಹಳ ದರ್ಪದಿಂದ, ಬೆದರಿಕೆಯೊಡ್ಡುವ ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದ್ದಾರೆ. ಇದರಿಂದ ತಮಗೆ ಬಹಳ ಬೇಸರವಾಗಿದೆ. ನಾನು ಸಾಮಾನ್ಯವಾಗಿ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಮನಸ್ಸಿಗೆ ಬಹಳ ಘಾಸಿಯಾಗಿರುವುದರಿಂದ ಮಾತನಾಡಬೇಕಾಯಿತು ಎಂದಿದ್ದಾರೆ.
ಟ್ವೀಟ್ ಮೂಲಕ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟಿ ಪೂಜಾ ಹೆಗ್ಡೆಗೆ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಮ್ಮ ಸಿಬ್ಬಂದಿಗೆ ತಿಳಿಸಿಕೊಡಿ ಎಂದು ಇಂಡಿಗೋ ಸಂಸ್ಥೆಗೆ ತಿಳಿಸಿದ್ದಾರೆ. ಪೂಜಾ ಹೆಗ್ಡೆ ಈಗ ವಿಜಯ್ ದೇವರಕೊಂಡ ಅವರ ಪ್ಯಾನ್ ಇಂಡಿಯಾ ಸಿನಿಮಾ 'ಜನಗಣಮನ' ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.