Kadaba:-ಕಾನೂನುಗಳು ದುರುಪಯೋಗ ಆದಾಗ ಅಂಬೇಡ್ಕರ್ ಅವರ ಆತ್ಮಕ್ಕೆ, ಅವರು ಬರೆದ ಸಂವಿಧಾನಕ್ಕೆ ಮಾಡುವ ದ್ರೋಹ.. ಎಸ್ಐ ಆಂಜನೇಯ ರೆಡ್ಡಿ.
Sunday, June 26, 2022
ಕಡಬ
ಸಂಘಟನೆಗಳು ಕಟ್ಟೋದು ದೊಡ್ಡ ವಿಷಯವಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆದರ್ಶ,ತತ್ವಗಳು ಸಂಘಟನೆಗಳು ಪಾಲನೆ ಮಾಡುವಾಗ ಸಂಘಟನೆಗೆ ಕೀರ್ತಿ ಬರುತ್ತೆ ಎಂದು ಕಡಬ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.
ಅವರು ಕಡಬ ಪೊಲೀಸ್ ಠಾಣೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯಲ್ಲಿ ಮಾತಾಡಿದರು.
ಸಂಘಟನೆಗಳು ಬಡವರಿಗೆ ಅದರಲ್ಲೂ ದಲಿತ ಸಮುದಾಯಕ್ಕೆ ಸರಕಾರದಿಂದ ಬರುವ ಹಲವಾರು ಯೋಜನೆಗಳಿವೆ ಅದರ ಬಗ್ಗೆ ಮಾಹಿತಿ ನೀಡುವುದು ಮತ್ತು ಅರ್ಹರಿಗೆ ಅದನ್ನು ತಲುಪಿಸುವ ಕೆಲಸಕ್ಕೆ ಮುಂದಾಗಬೇಕು. ಎಂದು ಹೇಳಿದರು.ಪೊಲೀಸ್ ದೂರುಗಳು ನೀಡುವಾಗ ವಾಸ್ತವತೆ, ಸತ್ಯಾಸತ್ತತೆ ಅರಿತು ದೂರುಗಳು ನೀಡಬೇಕು ವಿನಃ, ಹಗೆತನ, ದ್ವೇಷ, ಕಿರುಕುಳ ನೀಡುವ ಸಲುವಾಗಿ ಸುಳ್ಳು ದೂರುಗಳು ನೀಡಲು ಯಾರೂ ಮುಂದಾಗಬಾರದು. ಕಾನೂನುಗಳು ದುರುಪಯೋಗ ಆದಾಗ ಅಂಬೇಡ್ಕರ್ ಅವರ ಆತ್ಮಕ್ಕೆ, ಅವರು ಬರೆದ ಸಂವಿಧಾನಕ್ಕೆ ದ್ರೋಹ ಮಾಡಿದಾಗೆ ಆಗುತ್ತದೆ ಎಂದು ಠಾಣಾಧಿಕಾರಿಗಳು ಹೇಳಿದರು.
ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ಅಧಿಕಾರ ವಹಿಸಿದ ನಂತರದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಬೀಟ್, ಗಲಭೆ ಗಲಾಟೆಗಳು ನಿಯಂತ್ರಣ ಆಗಿದೆ. ಇದು ಅಭಿನಂದನಾರ್ಹ ಇದು ಇದೆ ತರಹ ಮುಂದುವರಿಯಲಿ ಮತ್ತು ಈ ಕೆಲವು ವರ್ಷಗಳ ಹಿಂದೆ ಇದ್ದ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಅವರ ಸಮಯದಲ್ಲಿ ಹಲವು ದಲಿತರ ಹಾಗೂ ಹಲವರ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗಿ ಇವಾಗಲೂ ಹಲವರು ಮಾನ್ಯ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ ಅಂತಹ ಘಟನೆಗಳು ತಮ್ಮ ಅವಧಿಯಲ್ಲಿ ಮರುಕಲಿಸಬಾರದು, ಪ್ರಕರಣದ ಸತ್ಯ ಪರಿಶೀಲನೆ ಮಾಡಿ ಪ್ರಕರಣ ದಾಖಲಾಗಲಿ ಎಂದು ದಲಿತ ಮುಖಂಡ ಆನಂದ ಮಿತ್ತಬೈಲು ಅವರು ಹೇಳಿದರು.
ದಲಿತರಿಗೆ ಇರುವ ಡಿ.ಸಿ ಮನ್ನಾ ಭೂಮಿಯ ಬಗ್ಗೆ ತಹಸೀಲ್ದಾರ್ ಆಗಲಿ, ಸ್ಥಳೀಯ ಗ್ರಾಮಕರಣಿಕರು ಆಗಲಿ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಮತ್ತು ಕಡಬದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಸುಚಿತ್ರಾ ರಾವ್ ಅವರು ರೋಗಿಗಳೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸದೆ ಹಲವು ರೋಗಿಗಳಿಗೆ ಪ್ರತಿ ದಿನ ತೊಂದರೆಯಾಗುತ್ತಿದೆ ಎಂದು ಗುರುವಪ್ಪ ಕಲ್ಲುಗುಡ್ಡೆ ಆರೋಪಿಸಿದರು.
ಸುಬ್ರಮಣ್ಯದಿಂದ ಈ ಹಿಂದೆ ಹೋಗುತ್ತಿದ್ದ ಸರಕಾರಿ ಬಸ್ಸುಗಳು ರಸ್ತೆ ಬದಲಾಯಿಸಿ ಮರ್ಧಾಳ ರಸ್ತೆಯಲ್ಲಿ ಹೋಗೋದರಿಂದ ಗುಂಡ್ಯ, ಉದನೆ, ಶೀರಾಡಿ ಭಾಗದಿಂದ ನೆಲ್ಯಾಡಿ, ಉಪ್ಪಿನಂಗಡಿಯ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಈ ಹಿಂದಿನ ರೀತಿಯಲ್ಲಿ ಬಸ್ ಬಂದಿಲ್ಲವಾದರೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಅನಿವಾರ್ಯ ಆಗಬಹುದು ಎಂದು ಶಶಿಧರ್ ಬೋಟ್ಟಡ್ಕ ಅವರು ಹೇಳಿದರು.
ಸಭೆಯಲ್ಲಿ ಕಡಬ ಠಾಣಾ ಎಎಸ್ಐ ಸುರೇಶ್ ಸಿ. ಟಿ , ಪೊಲೀಸ್ ಸಿಬ್ಬಂದಿಗಳಾದ ಭವಿತ್ ರೈ, ಶ್ರೀಶೈಲಾ ಹಾಗೂ ವಿವಿಧ ದಲಿತ ಸಂಘಟನೆಗಳ ಪ್ರಮುಖರಾದ ಅಣ್ಣಿ ಎಲ್ತೀಮಾರ್, ರಾಘವ ಕಳಾರ, ಗುರುವಪ್ಪ ಕಲ್ಲುಗುಡ್ಡೆ, ವಸಂತ ಕುಬುಲಾಡಿ, ಆನಂದ ಮಿತ್ತಬೈಲು, ಶಶಿಧರ್ ಬೊಟ್ಟಡ್ಕ, ಉಮೇಶ ಕೊಡಿಂಬಾಳ, ಆನಂದ ಚಾರ್ವಕ, ಅಣ್ಣು ದೋಲ್ಪಾಡಿ,ಶ್ರೀಮತಿ ಸುಂದರಿ ಕಲ್ಲುಗುಡ್ಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.