ಕಡಬ
ಜಾತಿ ಜಾತಿಯ ನಡುವೆ ಪೈಪೋಟಿ ನಡೆಯುವ ಸಮಯದಲ್ಲಿ ಜಾತಿಯಲ್ಲಿ ನೀತಿವಂತರಾಗುತ್ತೆವೋ ಆ ಸಮಯದಲ್ಲಿ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂಬುದಾಗಿ ಬಂದರು ಮತ್ತು ಒಳನಾಡು ಮೀನುಗಾರಿಕೆ ಹಾಗೂ ಉಡುಪಿ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಅವರು ಹೇಳಿದರು.
ಕಡಬದಲ್ಲಿ ನಡೆದ ದ.ಕ. ಜಿಲ್ಲಾ ಸವಿತಾ ಸಮಾಜ ಮಂಗಳೂರು ಇದರ ಆಶ್ರಯದಲ್ಲಿ ನೂತನ ಕಡಬ ತಾಲೂಕು ಸವಿತಾ ಸಮಾಜ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿಯ ಬಗ್ಗೆ ಅವಹೇಳನ ಮಾಡುವಾಗ ಬೇಸರ ಆಗೋದು ನಿಜ. ಆದರೆ ಆ ಅವಹೇಳನ ಸಹಿಸಿ ಸಾಧನೆ ಮಾಡಿ ತೋರಿಸುವಾಗ ನಮ್ಮ ಜೀವನ ಸ್ವಾರ್ಥಕವಾಗುತ್ತದೆ. ಸವಿತಾ ಸಮಾಜವು ಸಮಾಜದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಲಿ ಎಂದು ಕಡಬ ಸವಿತಾ ಸಮಾಜ ಘಟಕಕ್ಕೆ ಶುಭ ಹಾರೈಸಿದರು. ಈ ಸಮಯದಲ್ಲಿ ಸಚಿವರನ್ನು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನೂತನ ಘಟಕದ ಪದಗ್ರಹಣ ಕಾರ್ಯಕ್ರಮ ನಡೆಯಿತು.ಈ ಸಮಯದಲ್ಲಿ ಕುಮಾರಿ ವರ್ಷಾ, ರಾಷ್ಟ್ರ ಮಟ್ಟದ ಕ್ರೀಡಾಪಟ್ಟು ಕುಮಾರಿ ರಂಜಿನಿ, ಕ್ರೀಡಾಪಟ್ಟು ಕುಮಾರಿ ಶಾಲಿನಿ ಇವರನ್ನು ಸಚಿವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಸಮಾರಂಭ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ವಹಿಸಿದರು. ಸೀತಾರಾಮ ಗೌಡ ಪೊಸವೊಲಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದರು.