-->
ಪ್ರಿಯತಮನೊಂದಿಗೆ ಸಲುಗೆಯಿಂದಿದ್ದ ಇನ್ನೊಬ್ಬಳನ್ನು ಗ್ಯಾಂಗ್ ರೇಪ್ ಮಾಡಿಸಿದ ಪ್ರಿಯತಮೆ ಅರೆಸ್ಟ್

ಪ್ರಿಯತಮನೊಂದಿಗೆ ಸಲುಗೆಯಿಂದಿದ್ದ ಇನ್ನೊಬ್ಬಳನ್ನು ಗ್ಯಾಂಗ್ ರೇಪ್ ಮಾಡಿಸಿದ ಪ್ರಿಯತಮೆ ಅರೆಸ್ಟ್

ಹೈದರಾಬಾದ್​: ತನ್ನ ಪ್ರಿಯಕರನೊಂದಿಗೆ ಯುವತಿಯೋರ್ವಳು ಸಲುಗೆಯಿಂದ ಇರುವುದನ್ನು ಸಹಿಸದ ಪ್ರೇಯಸಿಯೋರ್ವಳು ಸುಪಾರಿ ನೀಡಿ ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿರುವ ಭಯಾನಕ ಘಟನೆಯೊಂದು ಹೈದರಾಬಾದ್​ನಲ್ಲಿ ನಡೆದಿದೆ.

ಹೈದರಾಬಾದ್​ನ ಕೊಂಡಾಪುರದ ನಿವಾಸಿ ಗಾಯತ್ರಿ ಎಂಬ ಖತರ್ನಾಕ್ ಯುವತಿ ಈ ಕೃತ್ಯ ಎಸಗಿದ್ದಾಳೆ. ಐವರು ಪುರುಷರಿಗೆ ಸುಪಾರಿ ನೀಡಿ ಪ್ರಿಯಕರನ ಇನ್ನೋರ್ವ ಸ್ನೇಹಿತೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿದ್ದಾಳೆ. ಮೇ 26 ರಂದು ಈ ಘಟನೆ ನಡೆದಿದ್ದು ಇದೀಗ ಪ್ರಕರಣ ಬೆಳಕಿದೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಾಯತ್ರಿ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ಗಾಯತ್ರಿ ಓರ್ವನೊಂದಿಗೆ ಜತೆ ಲಿವ್​ ಇನ್​ ಸಂಬಂಧದಲ್ಲಿದ್ದಳು. ಆಕೆಯ ಈ ಪ್ರಿಯಕರ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಿದ್ದು, ಈ ಸಂಬಂಧ ಕೋಚಿಂಗ್​ ಸೆಂಟರ್​ಗೆ ಹೋಗುತ್ತಿದ್ದ. ಈ ವೇಳೆ ಅಲ್ಲಿಯೇ ಕೋಚಿಂಗ್​ಗೆ ಬರುತ್ತಿದ್ದ ಯುವತಿಯೊಬ್ಬಳೊಂದಿಗೆ ಸಲುಗೆಯಿಂದಿದ್ದ.‌ ಇದರಿಂದ ತನ್ನ ಪ್ರಿಯಕರ ಆಕೆಯ ಜತೆ ಸಂಬಂಧ ಹೊಂದಿದ್ದಾನೆ ಎಂದು ಗಾಯತ್ರಿಗೆ ಅನುಮಾನ ಶುರುವಾಗಿದೆ. ಅವರಿಬ್ಬರೂ ಅಭ್ಯಾಸಕ್ಕೆಂದು ಒಟ್ಟಿಗೇ ಸಿಗುತ್ತಿದ್ದುದರಿಂದ ಈಕೆಗೆ ಅವರ ಮೇಲಿದ್ದ ಅನುಮಾನ ಇನ್ನೂ ಬಲವಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಎಂಬಂತೆ ಅವರಿಬ್ಬರ ವಾಟ್ಸ್​ಆ್ಯಪ್​ ಸಂಭಾಷಣೆ ಆಕೆಯನ್ನು ಮತ್ತಷ್ಟು ಸಂಶಯಕ್ಕೀಡಾಗಿಸಿದೆ. 

ಇದೇ ಕಾರಣಕ್ಕೆ ಐವರು ಪುರುಷರಿಗೆ ಹಣ ಕೊಟ್ಟು ಆಕೆಯನ್ನು ಅತ್ಯಾಚಾರ ಮಾಡುವಂತೆ ಹೇಳಿದ್ದಾಳೆ. ಯುವತಿಯನ್ನು ಮನೆಗೆ ಕರೆಸಿಕೊಂಡ ಗಾಯತ್ರಿ ಆಕೆಯೊಂದಯ ಮಾತನಾಡುವಂತೆ ನಾಟಕ ಮಾಡಿದ್ದಾಳೆ. ಕೊನೆಗೆ ಮನೆಯ ಬಾಗಿಲನ್ನು ಹಾಕಿದ್ದಾಳೆ. ಆಗ ಅಲ್ಲಿಗೆ ಸುಪಾರಿ ಪಡೆದುಕೊಂಡು ಬಂದಿದ್ದ ವಿಷ್ಣುವರ್ಧನ್, ಮನೋಜ್, ಮಸ್ತಾನ್, ಮುಜಾಹಿದ್ ಮತ್ತು ಮೌಲಾ ಅಲಿ ಎಲ್ಲರೂ ಸೇರಿ ಗ್ಯಾಂಗ್​ರೇಪ್​ ಮಾಡಿದ್ದಾರೆ.

ಇದೀಗ ಸಂತ್ರಸ್ತೆ ನೀಡಿರುವ ದೂರಿನನ್ವಯ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಚ್ಚಿಬೌಲಿ ಪೊಲೀಸ್ ನಿರೀಕ್ಷಕ ಜಿ.ಸುರೇಶ್ ಈ ಮಾಹಿತಿ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article