-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು ಪೊಲೀಸ್ ಶ್ವಾನದಳದ ಶ್ವಾನಕ್ಕೆ 'ಚಾರ್ಲಿ' ಎಂದು ನಾಮಕರಣ: ರಕ್ಷಿತ್ ಶೆಟ್ಟಿ ಸಿನಿಮಾದಿಂದ ಸ್ಪೂರ್ತಿ

ಮಂಗಳೂರು ಪೊಲೀಸ್ ಶ್ವಾನದಳದ ಶ್ವಾನಕ್ಕೆ 'ಚಾರ್ಲಿ' ಎಂದು ನಾಮಕರಣ: ರಕ್ಷಿತ್ ಶೆಟ್ಟಿ ಸಿನಿಮಾದಿಂದ ಸ್ಪೂರ್ತಿ

ಮಂಗಳೂರು: ರಕ್ಷಿತ್ ಶೆಟ್ಟಿಯವರ ಹೊಸ ಸಿನಿಮಾ 'ಚಾರ್ಲಿ 777' ಸಿನಿಮಾದಿಂದ ಸ್ಪೂರ್ತಿ ಪಡೆದ ಮಂಗಳೂರು ಪೊಲೀಸರು ಇಲಾಖೆಯ ಶ್ವಾನದಳದ ಶ್ವಾನಕ್ಕೆ ಚಾರ್ಲಿ ಎಂದು ನಾಮಕರಣ ಮಾಡಿದ್ದಾರೆ.

ಪೊಲೀಸ್ ಇಲಾಖೆಯು 3 ತಿಂಗಳ ಲ್ಯಾಬ್ರೊಡರ್ ರಿಟ್ರಿವರ್ ಶ್ವಾನವನ್ನು ಬಂಟ್ವಾಳದಿಂದ ಖರೀದಿಸಿದೆ. 2022 ಮಾರ್ಚ್ 16ಗೆ ಹುಟ್ಟಿದ ಈ ಶ್ವಾನವನ್ನು ಇಲಾಖೆಗಾಗಿ 20,000 ರೂ. ನೀಡಿ ಖರೀದಿಸಲಾಗಿದೆ‌‌. ಮುಂದೆ 3-4 ತಿಂಗಳ ಬಳಿಕ ಬೆಂಗಳೂರು ಸೌತ್ ಸಿಆರ್ ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ ಈ ಶ್ವಾನವು ಬಾಂಬ್ ನಿಷ್ಕ್ರಿಯ ಹಾಗೂ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತದೆ.

ನಿನ್ನೆ ಮಂಗಳೂರು ಪೊಲೀಸರು ರಕ್ಷಿತ್ ಶೆಟ್ಟಿಯವರು 'ಚಾರ್ಲಿ 777' ಸಿನಿಮಾ ಪ್ರೀಮಿಯರ್ ಶೋ ವೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿಯೂ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿಯೂ ಪಾತ್ರ ವಹಿಸಿದೆ. ಈ ಸಿನಿಮಾದಲ್ಲಿ ಮನುಷ್ಯ ಹಾಗೂ ಶ್ವಾನದ ನಡುವಿನ ಸಂಬಂಧವನ್ನು ಸೊಗಸಾಗಿ ಚಿತ್ರಿಸಲಾಗಿದೆ. ಇದೇ ಸ್ಪೂರ್ತಿಯಿಂದ ಮಂಗಳೂರು ಪೊಲೀಸ್ ಇಲಾಖೆ ಇಂದು ಈ ನಾಯಿಮರಿಗೆ ಚಾರ್ಲಿ ಎಂದು ನಾಮಕರಣ ಮಾಡಿದೆ.

Ads on article

Advertise in articles 1

advertising articles 2

Advertise under the article

ಸುರ