
ಪುತ್ತೂರು: ಟಿಪ್ಪರ್ ಲಾರಿ ಅಪಘಾತಕ್ಕೆ ಸ್ಕೂಟರ್ ಸವಾರೆ ಬಲಿ
6/18/2022 08:12:00 AM
ಮಂಗಳೂರು: ಟಿಪ್ಪರ್ ಲಾರಿ ಢಿಕ್ಕಿಯಾಗಿ ಸ್ಕೂಟರ್ ಸವಾರೆ ಮೃತಪಟ್ಟ ದುರ್ಘಟನೆಯೊಂದು ಶನಿವಾರ ಪೆರ್ನೆ ಬಳಿ ನಡೆದಿದೆ.
ಪುತ್ತೂರು ನಗರದ ಹಾರಾಡಿ ಪ್ರಜ್ವಲ್ ಸ್ಟೋರ್ ಮಾಲಕ, ನೆಕ್ಕಿಲಾಡಿ ನಿವಾಸಿ ಬಾಲಕೃಷ್ಣ ಭಟ್ ಎಂಬವರ ಪತ್ನಿ ಪೂರ್ಣಿಮಾ (47) ಮೃತಪಟ್ಟ ದುರ್ದೈವಿ.
ಬಾಲಕೃಷ್ಣ ಭಟ್ - ಪೂರ್ಣಿಮಾ ದಂಪತಿ ಪೆರ್ನೆಯಲ್ಲಿರುವ ತಮ್ಮ ತೋಟದೆಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಇವರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಅವರು ರಸ್ತೆಗೆಸೆದು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಗ್ರಾಮ ವಾಸ್ತವ್ಯಕ್ಕೆಂದು ಅದೇ ದಾರಿಯಾಗಿ ಬರುತ್ತಿದ್ದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.