ಕೇವಲ 50 ರೂ. ಜೇಬಿನಿಂದ ತೆಗೆದ ಸ್ನೇಹಿತನನ್ನೇ ಕೊಲೆಗೈದ ಯುವಕ

ಮಂಗಳೂರು: ಜೇಬಿನಿಂದ ಕೇವಲ 50 ರೂ. ತೆಗೆದುಕೊಂಡಿದ್ದಾನೆಂದು ಯುವಕನೋರ್ವನು ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಆತಂಕಕಾರಿ ಘಟನೆಯೊಂದು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮಾಧು ಹತ್ಯೆಯಾದ ದುರ್ದೈವಿ ಯುವಕ. ಈ ಶಿವಮಾಧು ತನ್ನ ಸ್ನೇಹಿತ ಶಾಂತಕುಮಾರ್ ನೊಂದಿಗೆ ಸೈಬರ್ ಸೆಂಟರ್ ಗೆ ಹೋಗಿದ್ದ. ಇಬ್ಬರೂ ಕ್ರಿಕೆಟ್ ಆಡಿ ಕುರುಬರಹಳ್ಳಿ ಸರ್ಕಲ್ ಬಳಿ ಬಂದಿದ್ದರು. ಈ ವೇಳೆ ಶಿವಮಾಧು ಶಾಂತಕುಮಾರ್ ಜೇಬ್ ನಿಂದ 50 ರೂ. ತೆಗೆದಿದ್ದಾನೆ‌. ಪರಿಣಾಮ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಮಾತಿಗೆ ಮಾತು ಬೆಳೆದು ಶಾಂತಕುಮಾರ್ ತನ್ನ ಬಳಿಯಿದ್ದ ಚಾಕುವಿನಿಂದ ಶಿವಮಾಧುವಿಗೆ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಶಿವಮಾಧುವನ್ನು ಇತರ ಸ್ನೇಹಿತರು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. 

ಪ್ರಕರಣ ದಾಖಲಿಸಿಕೊಂಡ ಬಸವೇಶ್ವರ ನಗರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu