ಮೇ 30ರಂದು ಊಹಿಸಲಾಗದ ಘಟನೆ ನಡೆದೋಯ್ತು: ಸರೀ ಒಂದು ತಿಂಗಳ ಬಳಿಕ ಆಕೆ ಇಹಲೋಕ ತ್ಯಜಿಸಿದಳು
Friday, July 1, 2022
ಪಾಲಕ್ಕಾಡ್: ಸಣ್ಣ ಕುಟುಂಬ, ತಂದೆ - ತಾಯಿ, ಇಬ್ಬರು ಸೋದರರು, ಮನೆಗೊಬ್ಬಳೇ ಮಗಳು. ಆದರೆ ಅವರಾರು ಊಹಿಸದ ಘಟನೆಯೊಂದು ಆಕೆಯ ಬಾಳಿನಲ್ಲಿ ನಡೆದೇ ಹೊಯ್ತು. ಆದರೆ ಅದಾಗಿ ಸರೀ ಒಂದು ತಿಂಗಳಿಗೆ ಆಕೆ ಈ ಲೋಕವನ್ನೇ ತ್ಯಜಿಸಿದಳು.
ಹೌದು ಪಾಲಕ್ಕಾಡ್ ನಿವಾಸಿ ಶ್ರೀಲಕ್ಷ್ಮೀ(18) ಎಂಬಾಕೆಯ ವಿಚಾರವನ್ನು ನಾವೀಗ ಹೇಳ ಹೊರಟಿದ್ದು. ಸುಗುನನ್- ಸಿಂಧೂ ದಂಪತಿಯ ಪುತ್ರಿ, ಇಬ್ಬರು ಸೋದರರ ಮುದ್ದಿನ ಸಹೋದರಿ ಈಕೆ. ಮೇ 30ರಂದು ಎಂದಿನಂತೆ ಈಕೆ ಕಾಲೇಜಿಗೆ ಹೋಗುತ್ತಿದ್ದಳು. ಆದರೆ ಪಕ್ಕದ ಮನೆಯ ನಾಯಿ ಈಕೆಗೆ ಕಚ್ಚಿದೆ. ಆರೋಗ್ಯ ಇಲಾಖೆಯ ಎಲ್ಲಾ ರೀತಿಯ ಚಿಕಿತ್ಸೆಯನ್ನು ಶ್ರೀಲಕ್ಷ್ಮೀ ಪಡೆದುಕೊಂಡು ಇದ್ದಳು.
ಆದರೆ ಅದೇನಾಯ್ತೋ ಗೊತ್ತಿಲ್ಲ, ಈ ನಡುವೆ ಕೆಲ ದಿನಗಳ ಹಿಂದೆ ಶ್ರೀಲಕ್ಷ್ಮೀ ಜ್ವರದಿಂದ ಬಳಲಾರಂಭಿಸಿದಳು. ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಯ್ತು. ತಪಾಸಣೆ ಮಾಡಿದ ವೈದ್ಯರು ಆಕೆಗೆ ರೇಬಿಸಿ ರೋಗ ಕಾಡುತ್ತಿದೆ ಎಂದರು. ತಕ್ಷಣ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಜೂ 30ರಂದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.