-->
ಶ್ರಾವಣ ಮಾಸದಲ್ಲಿ ಈ 3 ರಾಶಿಯವರ  ಮೇಲೆ ಇರಲಿದೆ ಶಿವನ ಕೃಪೆ..!!

ಶ್ರಾವಣ ಮಾಸದಲ್ಲಿ ಈ 3 ರಾಶಿಯವರ ಮೇಲೆ ಇರಲಿದೆ ಶಿವನ ಕೃಪೆ..!!
ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿಯ ಶ್ರಾವಣ ಮಾಸ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭವಾಗಿರಲಿದೆ. ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಮತ್ತು ಶಿವ ಶಂಕರನ ಕೃಪಾವೃಷ್ಟಿ ಅವರ ಮೇಲಾಗಲಿದೆ ಎನ್ನಲಾಗಿದೆ. ಈ ಅವಧಿಯಲ್ಲಿ, ಮೇಷ ರಾಶಿಯವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಅಷ್ಟೇ ಅಲ್ಲ ಮೇಷ ರಾಶಿಯವರಿಗೆ ಶ್ರಾವಣ ಮಾಸದಲ್ಲಿ ಆತ್ಮೀಯರ ಬೆಂಬಲ ಸಿಗಲಿದೆ. ಸ್ಥಗಿತಗೊಂಡ ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.


ಕರ್ಕ ರಾಶಿ - ಶ್ರಾವಣ ಮಾಸದಲ್ಲಿ ಶಿವನು ಈ ರಾಶಿಯ ಜನರ ಮೇಲೂ ಕೂಡ ತನ್ನ ಕೃಪಾದೃಷ್ಟಿ ಬೀರಲಿದ್ದಾನೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳಲ್ಲಿನ ಎಲ್ಲಾ ರೀತಿಯ ಅಡೆತಡೆಗಳು ದೂರಾಗಳಿವೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಅಭಿವೃದ್ಧಿಯ ಎಲ್ಲಾ ಸಾಧ್ಯತೆಗಳಿವೆ. ಆದಾಯದಲ್ಲಿ ಹಠಾತ್ ಹೆಚ್ಚಳವಾಗಬಹುದು. ನೀವು ಯಾವುದೇ ಹೊಸ ಕೆಲಸವನ್ನು ಮಾಡಲು ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಆರಂಭಿಸಬಹುದು. 

ಕನ್ಯಾ ರಾಶಿ - ಈ ರಾಶಿಯವರಿಗೆ ಶ್ರಾವಣ ಮಾಸವು ಸಂತಸದಿಂದ ಕೂಡಿರಲಿದೆ. ಈ ಅವಧಿಯಲ್ಲಿ, ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸ್ವಂತ ಛಾಪನ್ನು ಮೂಡಿಸುವಿರಿ. ಈ ಅವಧಿಯಲ್ಲಿ ನೀವು ಪ್ರಯಾಣ ಕೈಗೊಳ್ಳಬಹುದು ಮತ್ತು ಈ ಪ್ರಯಾಣವು ನಿಮ್ಮ ಪಾಲಿಗೆ ಪ್ರಯೋಜನಕಾರಿ ಸಬೀತಾಗಲಿದೆ. ಹೂಡಿಕೆಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article