-->
ಒಮ್ಮೆ ಚಾರ್ಜ್‌ ಮಾಡಿದರೆ 1,000 ಕಿ.ಮೀ. ಮೈಲೇಜ್‌ ನೀಡುತ್ತೆ ಈ ಸಂಸ್ಥೆ ತಯಾರಿಸಿದ ಕಾರು!

ಒಮ್ಮೆ ಚಾರ್ಜ್‌ ಮಾಡಿದರೆ 1,000 ಕಿ.ಮೀ. ಮೈಲೇಜ್‌ ನೀಡುತ್ತೆ ಈ ಸಂಸ್ಥೆ ತಯಾರಿಸಿದ ಕಾರು!

ಬೀಜಿಂಗ್‌: ಇಲೆಕ್ಟ್ರಿಕ್‌ ಕಾರು ಅಥವಾ ಬೈಕ್‌ನ ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್‌ ಮಾಡಿದಲ್ಲಿ ಎಷ್ಟು ದೂರ ಸಾಗಬಹುದು?. ಅಬ್ಬಬ್ಬಾ ಅಂದ್ರೆ 100-200 ಕಿ.ಮೀ. ದೂರ ಕ್ರಮಿಸಬಹುದು ಎಂದು ನೀವು ಅಂದಾಜಿಸಬಹುದು. ಆದರೆ ಚೀನಾದ ಸಂಸ್ಥೆಯೊಂದು ತಯಾರಿಸಿರುವ ಈ ಬ್ಯಾಟರಿ ಬಳಸಿದರೆ ಸುಮಾರು 1,000 ಕಿ.ಮೀ.ವರೆಗೆ ಚಾರ್ಜಿಂಗ್‌ ಚಿಂತೆಯಿಲ್ಲದೆ ಸಾಗಬಹುದಂತೆ!

ಹೌದು... ಚೀನಾದ ಪ್ರಸಿದ್ಧ ಇಲೆಕ್ಟ್ರಿಕ್‌ ಚಾಲಿತ ವಾಹನ ತಯಾರಕ ಸಂಸ್ಥೆ ಕಂಟೆಂಪರರಿ ಆ್ಯಂಪೆರೆಕ್ಸ್‌ ಟೆಕ್ನಾಲಜಿ ಕೊ. ಲಿ.(ಸಿಎಟಿಎಲ್‌) “ಕಿಲಿನ್‌’ ಹೆಸರಿನ ಬ್ಯಾಟರಿಯೊಂದನ್ನು ತಯಾರಿಸಿದೆ. ಇದನ್ನು ಇಲೆಕ್ಟ್ರಿಕ್‌ ಚಾಲಿತ ಕಾರುಗಳಿಗಾಗಿಯೇ ತಯಾರಿಸಲಾಗಿದೆ. ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್‌ ಮಾಡಿದ್ದಲ್ಲಿ 1,000 ಕಿ.ಮೀ. ಕ್ರಮಿಸುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಅದಷ್ಟೇ ಅಲ್ಲದೆ, ಸರ್ವೀಸ್‌ ಲೈಫ್, ಸುರಕ್ಷತೆ, ಚಾರ್ಜಿಂಗ್‌ ವೇಗ ಮತ್ತು ಉಷ್ಣಾಂಶ ತಡೆದುಕೊಳ್ಳುವು ದರಲ್ಲೂ ಈ ಬ್ಯಾಟರಿ ಈಗಿರುವ ಎಲ್ಲ ಬ್ಯಾಟರಿಗಳಿಗಿಂತ ಉತ್ತಮವಾಗಿದೆಯಂತೆ. ದೊಡ್ಡ ಪ್ರಮಾಣದಲ್ಲಿ ಕಿಲಿನ್‌ ಉತ್ಪಾದನೆಗೆ ಸಂಸ್ಥೆ ಕೈ ಹಾಕಿದ್ದು, 2023ರಲ್ಲಿ ಮಾರುಕಟ್ಟೆಗೆ ಅದನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article