-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅವಳಿ ಸಹೋದರರು ಸಾಮ್ಯತೆಯ ದುರ್ಲಭ ಪಡೆದು ಇಬ್ಬರಿಂದಲೂ ನವವಧುವಿನ ನಿರಂತರ ಅತ್ಯಾಚಾರ!

ಅವಳಿ ಸಹೋದರರು ಸಾಮ್ಯತೆಯ ದುರ್ಲಭ ಪಡೆದು ಇಬ್ಬರಿಂದಲೂ ನವವಧುವಿನ ನಿರಂತರ ಅತ್ಯಾಚಾರ!

ಲಾತೂರ್(ಮಹಾರಾಷ್ಟ್ರ): ಅವಳಿ ಸಹೋದರರು ತಮ್ಮಿಬ್ಬರ ನಡುವಿನ ಸಾಮ್ಯತೆಯ ಲಾಭ ಪಡೆದುಕೊಂಡು ಓರ್ವ ಮದುವೆಯಾಗಿ ಮತ್ತೋರ್ವನು ನವವಧುವನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಘಟನೆ ನಡೆದಿದೆ. ಈಕೆ ತವರು ಮನೆಯಲ್ಲಿ ಬಂದ ಬಳಿಕವಷ್ಟೇ ಈ ಘಟನೆ ಬೆಳಕಿಗೆ ಬಂದಿದೆ.

ಲಾತೂರಿನ ರಿಂಗ್ ರೋಡ್ ನಿವಾಸಿ ಯುವಕನೋರ್ವನು ಆರು ತಿಂಗಳ ಹಿಂದೆ ವಿವಾಹವಾಗಿದ್ದ. ಈತನಿಗೆ ಇನ್ನೋರ್ವನು ಅವಳಿ ಸಹೋದರನಿದ್ದ. ಇವರಿಬ್ಬರನ್ನು ಬೇರೆ ಬೇರೆ ಎಂದು ಗುರುತಿಸಲು ಸಾಧ್ಯವಾಗದಷ್ಟು ಸಾಮ್ಯತೆ ಇತ್ತು. ಹಾಗಾಗಿ, ನವವಧುವಿಗೆ ಪತಿ ಹಾಗೂ ಪತಿಯ ಸಹೋದರ ಯಾರು ಎಂಬುದು ಅರ್ಥವಾಗಿರಲಿಲ್ಲ. 

ಇದರ ಲಾಭವನ್ನು ಪಡೆದ ಪತಿಯ ಸಹೋದರ ವಧುವನ್ನು ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮದುವೆಯಾದ ಆರು ತಿಂಗಳ ಬಳಿಕ ಆಕೆಗೆ ಈ ವಿಚಾರ ತಿಳಿದು ಬರುತ್ತದೆ.

ಈ ಬಗ್ಗೆ ಅರಿತುಕೊಂಡ ವಧು ಎಚ್ಚೆತ್ತು ಪತಿಗೆ ಸೂಚಿಸಿದ್ದಾಳೆ. ಆದರೆ, ಆತ ಏನು ತೊಂದರೆ ಇಲ್ಲ ಮುಂದುವರಿಸು ಎಂದು ಕೈಚೆಲ್ಲಿದ್ದಾನೆ. ಇದರಿಂದ ಕಂಗೆಟ್ಟ ಸಂತ್ರಸ್ತೆ ಅತ್ತೆಗೆ ಮಾಹಿತಿ ನೀಡಿದ್ದಾಳೆ. ಅತ್ತೆಯೂ ಪುತ್ರ ಹೇಳಿದಂತೆ ಹೇಳಿ ಕಳುಹಿಸಿದ್ದಾಳೆ. ಇದರಿಂದ ಬೇಸತ್ತ ಯುವತಿ ತವರು ಮನೆಗೆ ಮರಳಿದ್ದಾಳೆ. 

ಕೆಲವು ದಿನಗಳ ಬಳಿಕ ಮಾವ ಯುವತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ, ಯುವತಿ ಮಾವನೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಪತಿಯ ಮನೆಗೆ ಯಾಕೆ ಹೋಗೋದಿಲ್ಲವೆಂದು ಆಕೆಯ ಮನೆಯವರು ಕೇಳಿದಾಗ ಎಲ್ಲಾ ವಿಚಾರವನ್ನು ತಿಳಿಸಿದ್ದಾಳೆ.

ತಕ್ಷಣ ಆಕೆಯ ಪೋಷಕರು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 378, 323, 506 ಮತ್ತು 24ರ ಅಡಿ ಪ್ರಕರಣ ದಾಖಲಾಗಿದ್ದು, ಅವಳಿ ಸಹೋದರರನ್ನು ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article

ಸುರ