-->
ರಾಖಿ ಸಾವಂತ್ ಬಗ್ಗೆ ಹೊಸ ಬಾಯ್ ಫ್ರೆಂಡ್ ಹೇಳಿದ್ದೇನು ಗೊತ್ತೇ? ಕೇಳಿದ್ರೆ ಅಚ್ಚರಿ ಪಡ್ತೀರಾ

ರಾಖಿ ಸಾವಂತ್ ಬಗ್ಗೆ ಹೊಸ ಬಾಯ್ ಫ್ರೆಂಡ್ ಹೇಳಿದ್ದೇನು ಗೊತ್ತೇ? ಕೇಳಿದ್ರೆ ಅಚ್ಚರಿ ಪಡ್ತೀರಾ

ಮುಂಬೈ: ಸದಾ ಪ್ರೀತಿ, ಪ್ರೇಮ ಹಾಗೂ ವಿವಾಹ ವಿಚಾರದಲ್ಲಿ ಬಾಲಿವುಡ್​ ನಟಿ ರಾಖಿ ಸಾವಂತ್​ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಹಲವು ವರ್ಷಗಳ ಹಿಂದೆ ಸ್ವಯಂವರ ನಡೆಸಿ ರಾಖಿ ಸುದ್ದಿಯಲ್ಲಿದ್ದಾರೆ. ಅಲ್ಲದೆ ಅವರು ಕಳೆದ ವರ್ಷ ಮದುವೆಯಾಗಿ ಹಿಂದಿಯ ಬಿಗ್​ ಬಾಸ್​ ಶೋನಲ್ಲಿ ತನ್ನ ಪತಿ ರಿತೇಶ್​ ಎಂದು ಪರಿಚಯ ಮಾಡಿದ್ದರು. ಶೋ ಮುಗಿದ ಬೆನ್ನಲ್ಲೇ ಇಬ್ಬರು ಬೇರೆ ಬೇರೆಯಾಗಿ ಸುದ್ದಿಯಾಗಿದ್ದರು. 

ಇದೀಗ ಪತಿಯಿಂದ ಬೇರೆಯಾಗಿದ್ದ  ರಾಖಿ ಇತ್ತೀಚೆಗಷ್ಟೇ ತಮ್ಮ ಹೊಸ ಬಾಯ್​ಫ್ರೆಂಡ್​ ಅನ್ನು ಪರಿಚಯಿಸಿದ್ದಾರೆ. ರಾಖಿಯ ಹೊಸ ಬಾಯ್​ಫ್ರೆಂಡ್​ ನಮ್ಮ ಕರ್ನಾಟಕದ ಮೈಸೂರಿನವರು. ಆದಿಲ್ ದುರ್ರಾನಿ​ ಎಂಬ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ 'ತನಗಾಗಿ ತನ್ನ ಬಾಯ್​ಫ್ರೆಂಡ್​ ಆದಿಲ್​, ದುಬೈನಲ್ಲಿ ತನ್ನ ಹೆಸರಿನಲ್ಲಿ ಮನೆ ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ತನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಜವಾಗಿ ಹೇಳುತ್ತೇನೆ ಆತನ ಪ್ರೀತಿಯೇ ನನ್ನ ಸಂಪತ್ತು. ಆತನ ಪ್ರೀತಿ ನಿಜವಾದದ್ದು, ಅಷ್ಟೇ ಪ್ರಾಮಾಣಿಕವಾದದ್ದು. ಆತ ನನ್ನನ್ನು ಗಂಭೀರವಾಗಿ ಪರಿಗಣಿಸಿದ್ದಾನೆ. ಬೇರೆ ಯಾವ ವ್ಯಕ್ತಿ ತಾನೇ ತನ್ನ ಪ್ರೀತಿಯನ್ನು ತನ್ನ ಕುಟುಂಬಕ್ಕೆ ಇಷ್ಟು ಬೇಗ ಪರಿಚಯಿಸುತ್ತಾನೆ? ನೀವೇ ಹೇಳಿ ಎಂದಿದ್ದಾರೆ.

ಅದೇ ಸಂದರ್ಭ ಸಂದರ್ಶನದಲ್ಲಿ ಆದಿಲ್ ಮಾತನಾಡಿ, ತಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲು ಇದು ಸಣ್ಣ ಆರಂಭ. ರಾಖಿ ಸಾವಂತ್ ಅವರಲ್ಲಿ ಏನನ್ನು ಬದಲಾಯಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆದಿಲ್​, ಹೆಚ್ಚೇನೂ ಇಲ್ಲ, ಕಡಿಮೆ ಗ್ಲಾಮರಸ್​ ಇರುವ ಮತ್ತು ದೇಹ ಮುಚ್ಚುವ ಉಡುಪುಗಳನ್ನು ಧರಿಸಬೇಕೆಂದು ಭಾವಿಸುತ್ತೇನೆ ಎಂದರು. 

ತನಗೆ ರಾಖಿ ಸಾವಂತ್ ವೃತ್ತಿ ಜೀವನ, ಸಾಧನೆಗಳ ಬಗ್ಗೆ ಹೆಚ್ಚೇನು ತಿಳಿದಿಲ್ಲ. ಅವರ ಕೆಲವೊಂದಿಷ್ಟು ಕೆಲಸಗಳನ್ನು ನೋಡಿದ್ದೇನೆ. ತಮ್ಮ ಬಗ್ಗೆ ತಾವೇ ಸಂಪೂರ್ಣವಾಗಿ ಅವರೇ ತಿಳಿಸಿದ್ದಾರೆ. ರಿತೇಶ್​ ರೊಂದಿಗೆ ನಡೆದಿರುವ ಮದುವೆ ಹಾಗೂ ಅವರಿಂದ ದೂರವಾದ ಸಂಗತಿಯನ್ನು ತಿಳಿಸಿದ್ದಾರೆ. ಇದಕ್ಕೂ ಮೊದಲು ಎಲ್ಲವೂ ತಿಳಿದಿರಲಿಲ್ಲ ಆದರೆ, ಈಗ ರಾಖಿ ಬಗ್ಗೆ ಎಲ್ಲವೂ ತಿಳಿದಿದೆ. ಟಿವಿ ಹಾಗೂ ಸಿನಿಮಾಗಳಲ್ಲಿ ನೋಡಿದ ರಾಖಿಗೂ ನಿಜವಾಗಿ ಇರುವ ರಾಖಿಗೂ ಬಹಳ ವ್ಯತ್ಯಾಸವಿದೆ. ಅವರು ಸರಳ ಹಾಗೂ ವಿನಮ್ರ ವ್ಯಕ್ತಿ ಮತ್ತು ಸಣ್ಣ ವಿಚಾರಕ್ಕೂ ಸಂತೋಷ ಪಡುವ ವ್ಯಕ್ತಿತ್ವದವರು. ಆದರೆ, ಸಾರ್ವಜನಿಕವಾಗಿ ಅವರ ಬಗ್ಗೆ ತದ್ವಿರುದ್ಧವಾದ ಇಮೇಜ್​ ಇದೆ ಎಂದು ಹೇಳಿದರು. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100