-->

ಪತ್ನಿಯನ್ನು ಕಲ್ಲು ಎತ್ತಿ ಹಾಕಿ, ಆಕೆಯ ಪ್ರಿಯಕರನ ಗುಪ್ತಾಂಗವನ್ನೇ ಛಿದ್ರಗೊಳಿಸಿ ಹತ್ಯೆಗೈದ ಪತಿ ಅಂದರ್‌

ಪತ್ನಿಯನ್ನು ಕಲ್ಲು ಎತ್ತಿ ಹಾಕಿ, ಆಕೆಯ ಪ್ರಿಯಕರನ ಗುಪ್ತಾಂಗವನ್ನೇ ಛಿದ್ರಗೊಳಿಸಿ ಹತ್ಯೆಗೈದ ಪತಿ ಅಂದರ್‌

ಹೈದರಾಬಾದ್​: ಪರಪುರುಷನೊಂದಿಗೆ ಏಕಾಂತದಲ್ಲಿದ್ದ ಪತ್ನಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಪತಿ, ಆಕೆಯ ಪ್ರಿಯಕರನ ಮರ್ಮಾಂಗವನ್ನೇ ಛಿದ್ರಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ‌. 

ಹೈದರಾಬಾದ್ ಉಪನಗರದ ಅಬ್ದುಲ್ಲಾಪುರ್ಮೆಟ್ ವಲಯದ ಕೊಟ್ಟಗುಡೆಮ್ ಬಳಿ ಈ ಜೋಡಿ ಕೊಲೆ ನಡೆದಿತ್ತು. ಪ್ರಕರಣವನ್ನು ಬೇಧಿಸಿರುವ ಪೊಲೀಸರು ತಾಂತ್ರಿಕ ಪುರಾವೆಗಳ ನೆರವಿನಿಂದ ಮೃತ ಯುವತಿಯ ಪತಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣದ ಅಸಲಿಯತ್ತು ಬಹಿರಂಗಗೊಂಡಿದೆ.

ಘಟನೆಯ ವಿವರ: ಅಬ್ದುಲ್ಲಾಪುರ ವಲಯದ ಕೊಟ್ಟಗುಡೆಂ ಬಳಿಯ ನಿರ್ಜನ ಪ್ರದೇಶವೊಂದರಲ್ಲಿ ಈ ಜೋಡಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಘಟನೆ ನಡೆದು ಮೂರು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೊಟ್ಟಗುಡ್ಡೆಂ ಬಳಿಯ ರಾಷ್ಟ್ರೀಯ ಹೆದ್ದಾರಿ ​65ರ ಪಕ್ಕದಲ್ಲಿ ಎರಡು ಮೃತದೇಹಗಳಿವದ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಮಾಹಿತಿಯನ್ನು ಆಧರಿಸಿ ಅಬ್ದುಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ. ಆಗ ಅಲ್ಲಿ ನಗ್ನವಾಗಿದ್ದ ರಕ್ತಸಿಕ್ತ ಜೋಡಿ ಮೃತದೇಹಗಳು ಪತ್ತೆಯಾಗಿತ್ತು. ಆದರೆ ಮೃತದೇಹದ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. 

ಆದರೆ ಅಲ್ಲೇ ಸಮೀಪದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸಂಖ್ಯೆಯನ್ನು ಆಧರಿಸಿ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಾರೆ. ವಾಹನದ ಮಾಲಕ ವಾರಸಿಗೂಡಾದ ಯಡ್ಲ ಅನಿರುದ್ಧ ಅನ್ನೋದು ಪೊಲೀಸರಿಗೆ ತಿಳಿದು ಬರುತ್ತದೆ. ಈ ಬಗ್ಗೆ ಅನಿರುದ್ಧ್‌ಗೆ ಮಾಹಿತಿ ನೀಡಿದ್ದಾರೆ. ಆಗ ಆತ ಸ್ಥಳಕ್ಕೆ ಬಂದು ಮೃತದೇಹವನ್ನು ಗುರುತಿಸಿ, ಮೃತರಲ್ಲಿ ಓರ್ವ ತನ್ನ ಸಹೋದರ ಯಶವಂತ್‌(22) ಎಂದು ದೃಢಪಡಿಸಿದ್ದಾನೆ.

ಅಲ್ಲಿಯೇ ದೊರೆತ ಕೈಚೀಲದಲ್ಲಿದ್ದ ಮಸೀದಿಯನ್ನು ಆಧರಿಸಿ ಮೃತಪಟ್ಟ ಮತ್ತೊಂದು ದೇಹ ವಾರಸಿಗೂಡದ ಜ್ಯೋತಿ (30) ಎಂದು ಗುರುತಿಸಲಾಗುತ್ತದೆ. ಆ ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ ಪೊಲೀಸರು ಜ್ಯೋತಿಯ ಪತಿಯನ್ನು ವಿಚಾರಣೆ ಮಾಡುತ್ತಾರೆ. ಮೊದಲಿಗೆ ಆತ ಬಾಯಿ ಬಿಡದಿದ್ದರೂ, ಬಳಿಕ ಪೊಲೀಸ್ ಭಾಷೆಯಲ್ಲಿ ಆತನನ್ನು ವಿಚಾರಣೆ ನಡೆಸಿದಾಗ ಆರೋಪಿ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ವಾರಸಿಗೂಡಾದಲ್ಲಿ ಜ್ಯೋತಿ ತನ್ನ ಪತಿಯೊಂದಿಗೆ ವಾಸವಾಗಿದ್ದಳು. ಆಕೆಯ ಪತಿ ಸ್ಟೀಲ್​ ಸಾಮಗ್ರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಇದೇ ಪ್ರದೇಶದಲ್ಲಿ ಯಡ್ಲ ಯಶವಂತ್​ ಎಂಬ ಯುವಕನ ಕುಟುಂಬವೂ ನೆಲೆಸಿದೆ. ಯಶವಂತ್ ಕ್ಯಾಬ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಯಶವಂತ್​ ಮತ್ತು ಜ್ಯೋತಿಗೆ ಪರಿಚಯವಾಗಿದೆ. ಈ ಪರಿಚಯ ಇವರಿಬ್ಬರ ನಡುವೆ ವಿವಾಹೇತರ ಸಂಬಂಧಕ್ಕೆ ತಿರುಗಿದೆ.

ಯಡ್ಲ ಯಶವಂತ್ ಮತ್ತು ಜ್ಯೋತಿ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪತಿ ಹಿಂದೊಮ್ಮೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದನಂತೆ. ಆದರೂ ಅವರ ನಡವಳಿಕೆ ಬದಲಾಗಲಿಲ್ಲ. ಯಶವಂತ್ ಮತ್ತು ಜ್ಯೋತಿ ಭರವಿವಾರ ಸಂಜೆ ದ್ವಿಚಕ್ರ ವಾಹನದಲ್ಲಿ ವಾರಸಿಗುಡದಿಂದ ತೆರಳುತ್ತಿರುವುದನ್ನು ಪತಿ ಗಮನಿಸಿ ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲದೆ ದಾರಿ ನಡುವೆ ಮದ್ಯವನ್ನು ಖರೀದಿಸಿ, ದಾರಿಯುದ್ದಕ್ಕೂ ಕುಡಿಯುತ್ತಲೇ ಹಿಂಬಾಲಿಸಿದ್ದಾನೆ. ಹೀಗೆ ಸಾಗಿದಾಗ ಸುಮಾರು 30 ಕಿ.ಮೀ ದೂರದಲ್ಲಿರುವ ಅಬ್ದುಲ್ಲಾಪುರ್ಮೀಟ್ ವಲಯದ ಕೊಟ್ಟಗುಡ್ಡೆಂ ಬಳಿಯ ನಿರ್ಜನ ಪ್ರದೇಶದ ಪೊದೆಯೊಳಗೆ ತನ್ನ ಪತ್ನಿ ಮತ್ತು ಪ್ರಿಯಕರ ಹೋಗುವುದನ್ನು ನೋಡಿದ್ದಾನೆ. ಪೊದೆಯೊಳಗೆ ಹೋದ ​ಯಶವಂತ್ ಮತ್ತು ಜ್ಯೋತಿ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದರು. ಇದನ್ನು ಪತಿ ಪ್ರತ್ಯಕ್ಷವಾಗಿ ನೋಡಿದ್ದನಂತೆ. ಕೋಪದಿಂದ ಪಕ್ಕದಲ್ಲಿದ್ದ ಕಲ್ಲನ್ನೆತ್ತಿ ಎತ್ತಿ ಜ್ಯೋತಿ ತಲೆಗೆ ಹಾಕಿಯೇ ಬಿಟ್ಟ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆತ ತಾನು ತಂದಿದ್ದ ಸ್ಕ್ರೂಡ್ರೈವರ್​ನಿಂದ ಯಶವಂತ್ ಹೃದಯಕ್ಕೆ ಚುಚ್ಚಿದ್ದಾನೆ. ಆತನೂ ಕುಸಿದು ಬಿದ್ದ. ಹೀಗೆ ಬಿದ್ದ ಆತನ ಗುಪ್ತಾಂಗವನ್ನೂ ಛಿದ್ರಗೊಳಿಸಿ ಹತ್ಯೆ ಮಾಡಿದ್ದಾನೆ. ಹೀಗಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಾತ್ರಿ ಮಾಡಿಕೊಂಡ ಮೇಲಷ್ಟೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Ads on article

Advertise in articles 1

advertising articles 2

Advertise under the article