-->

ಸುಪ್ರೀಂ ಕೋರ್ಟ್, ಸರಕಾರದ ಆದೇಶಕ್ಕೆ ತಲೆಬಾಗಿ ಅಜಾನ್ ಮೈಕ್ ನಿಲ್ಲಿಸಿದ ಕುದ್ರೋಳಿಯ ಜಾಮಿಯಾ ಮಸೀದಿ

ಸುಪ್ರೀಂ ಕೋರ್ಟ್, ಸರಕಾರದ ಆದೇಶಕ್ಕೆ ತಲೆಬಾಗಿ ಅಜಾನ್ ಮೈಕ್ ನಿಲ್ಲಿಸಿದ ಕುದ್ರೋಳಿಯ ಜಾಮಿಯಾ ಮಸೀದಿ

ಮಂಗಳೂರು: ಸುಪ್ರೀಂ ಕೋರ್ಟ್ ಆದೇಶ ಹಾಗೂ ರಾಜ್ಯ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಇಂದಿನಿಂದಲೇ ಆಜಾನ್​ ಧ್ವನಿವರ್ಧಕ ಸ್ಥಗಿತಗೊಂಡಿದೆ.

ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಪ್ರಾತಃಕಾಲದ ಆಜಾನ್​ಗೆ ಧ್ವನಿವರ್ಧಕ ಬಳಸುವುದನ್ನು ಸ್ಥಗಿತಗೊಳಿಸಲಾಗಿದೆ. ದಿನದ ಐದು ಬಾರಿಯ ನಮಾಜ್ ಆಜಾನ್ ವೇಳೆಯೂ ಧ್ವನಿವರ್ಧಕ ಬಳಸದಿರಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಜಾಮಿಯಾ ಮಸೀದಿಯ ಅಧ್ಯಕ್ಷ ಕೆ.ಎಸ್. ಮಹಮ್ಮದ್ ಮಸೂದ್ ಹೇಳಿದ್ದಾರೆ.

ಈ ಬಗ್ಗೆ ಕುದ್ರೋಳಿ ಜಾಮಿಯಾ ಮಸೀದಿಯ ಅಧ್ಯಕ್ಷ ಕೆ.ಎಸ್. ಮಸೂದ್ ಮಾತನಾಡಿ, ಆಜಾನ್ ಮೈಕ್ ಬಳಕೆ ಬಗ್ಗೆ ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರವೂ ಮಾರ್ಗಸೂಚಿಯನ್ನು ಹೊರಡಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ನಾನು ಅಧ್ಯಕ್ಷನಾಗಿರುವ ಕುದ್ರೋಳಿ ಜಾಮೀಯಾ ಮಸೀದಿಯಲ್ಲಿ ಇಂದಿನಿಂದಲೇ ಆಜಾನ್​ಗೆ ಧ್ವನಿವರ್ಧಕ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಐದು ಹೊತ್ತಿನ ಸಮಯದಲ್ಲೂ ಕೂಡ ಆಜಾನ್​ಗೆ ಧ್ವನಿವರ್ಧಕವನ್ನು ಬಳಸುವುದಿಲ್ಲ. ಸುಪ್ರೀಂ ಮತ್ತು ಸರ್ಕಾರದ ಆದೇಶಕ್ಕೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
Ads on article

Advertise in articles 1

advertising articles 2

Advertise under the article