-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರ ಮಂಗಳೂರಿನಲ್ಲಿ ಸ್ಥಾಪನೆ

ಮಂಗಳೂರು: ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರ ಮಂಗಳೂರಿನಲ್ಲಿ ಸ್ಥಾಪನೆ

ಮಂಗಳೂರು : ದೇಶಾದ್ಯಂತ 45 ಸಾವಿರಕ್ಕೂ ಅಧಿಕ ಕ್ಲಿನಿಕಲ್ ಗರ್ಭಧಾರಣೆಯನ್ನು ಯಶಸ್ವಿಯಾಗಿ ಪೂರೈಸಿರುವ ನೋವಾ ಐವಿಎಫ್ ಫರ್ಟಿಲಿಟಿ ತನ್ನ ಕೇಂದ್ರವನ್ನು ಮಂಗಳೂರು ಕೇಂದ್ರದಲ್ಲಿ ಸ್ಥಾಪನೆಯಾಗಿದೆ. ಈ ಮೂಲಕ ಇತ್ತೀಚಿನ ತಂತ್ರಜ್ಞಾನ, ನುರಿತ ಐವಿಎಫ್ ತಜ್ಞರು ಹಾಗೂ ಭ್ರೂಣ ಶಾಸ್ತ್ರಜ್ಞರೊಂದಿಗೆ ಅತ್ಯಾಧುನಿಕ ಫರ್ಟಿಲಿಟಿ ಚಿಕಿತ್ಸೆಯನ್ನು ಇಲ್ಲಿನ ದಂಪತಿಗೆ ಸಾಧ್ಯವಾಗಲಿದೆ.

ನೋವಾ ಐವಿಎಫ್ ಫರ್ಟಿಲಿಟಿ ಸಿಇಒ ಎಸ್.ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಂಪತಿಯಲ್ಲಿ‌ ಬಂಜೆತನ ಅಧಿಕವಾಗುತ್ತಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ ದಂಪತಿಗಳಿಗೆ ಫರ್ಟಿಲಿಟಿ ಚಿಕಿತ್ಸಾ ಕೇಂದ್ರಗಳು ಲಭ್ಯವಿರುತ್ತದೆ‌. ಆದರೆ ಇತರ ನಗರಗಳಲ್ಲಿಈ ಅವಕಾಶವಿಲ್ಲ. ಆದ್ದರಿಂದ ಮಂಗಳೂರು ನಗರದಲ್ಲಿ ನಮ್ಮ ಕೇಂದ್ರವನ್ನು ಸ್ಥಾಪಿಸಿ ಕಾಸರಗೋಡು, ಬಂಟ್ವಾಳ, ಕುಂದಾಪುರ ಇನ್ನಿತರ ಇಲ್ಲಿನ ಪ್ರದೇಶಗಳ ದಂಪತಿಗಳಿಗೆ ಸೇವೆಯನ್ನು ಒದಗಿಸುವ ಭರವಸೆ ನೀಡುತ್ತೇವೆ. ಈ ಮೂಲಕ ಬಂಜೆತನ ಸಮಸ್ಯೆಗಳನ್ನು ನಿವಾರಣೆ ಮಾಡಲಿದ್ದೇವೆ ಎಂದರು.

ಅಧ್ಯಯನದ ಪ್ರಕಾರ ಸುಮಾರು 10-15 ಭಾರತೀಯ ದಂಪತಿ ಫರ್ಟಿಲಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಇವರು ನೈಸರ್ಗಿಕ ವಿಧಾನಗಳ ಮೂಲಕ ಗರ್ಭಧರಿಸಲು ಅಸಮರ್ಥರಾಗಿದ್ದಾರೆ‌. ಈ ದಂಪತಿಗಳಲ್ಲಿ ಕೇವ 1% ಮಾತ್ರ ಫರ್ಟಿಲಿಟಿ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ‌.  ಸದ್ಯ ಮೋವಾ ಐವಿಎಫ್ ಫರ್ಟಿಲಿಟಿಯು ಭಾರತದ 37 ನಗರಗಳಲ್ಲಿ 53 ಫರ್ಟಿಲಿಟಿ ಕೇಂದ್ರಗಳನ್ನು ನಿರ್ವಹಿಸುತ್ತಿದೆ ಎಂದರು.




Ads on article

Advertise in articles 1

advertising articles 2

Advertise under the article

ಸುರ