ಪತಿ ಚಲಾಯಿಸುತ್ತಿದ್ದ ರೋಟರ್ ಟ್ರ್ಯಾಕ್ಟರ್ ಗೆ ಸಿಲುಕಿ ಪತ್ನಿ ಮೃತ್ಯು

ಕೋಲಾರ: ಸಾವು ಎಂಬುದು ವಿಚಿತ್ರ. ಅದು ಯಾರಿಗೆ, ಎಲ್ಲಿ, ಹೇಗೆ ಬರುತ್ತದೆ ಎಂದು ಹೇಳೋದೇ ಅಸಾಧ್ಯ. ಇಲ್ಲೊಂದು ಅಂತಹದ್ದೇ ಒಂದು ಸಾವೊಂದು ನಡೆದಿದೆ. ದುರದೃಷ್ಟಕರ ವಿಚಾರವೆಂದರೆ ಕೋಲಾರದಲ್ಲಿ ಪತಿಯೇ ಚಲಾಯಿಸುತ್ತಿದ್ದ ರೋಟರ್ ಟ್ರ್ಯಾಕ್ಟರ್ ಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾರೆ. 

ಕೋಲಾರದ ಕಲ್ವಾಮಂಜಲಿ ಎಂಬ ಗ್ರಾಮದಲ್ಲಿ ಈ ದುರಂತ ಪ್ರಕರಣ ನಡೆದಿದೆ. ಪತಿ ರಾಜೇಶ್ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನಡಿಗೆ ಸಿಲುಕಿ ಪತ್ನಿ ಪ್ರೇಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೃಷಿಯಂತ್ರಧಾರೆಯಡಿ ಟ್ರ್ಯಾಕ್ಟರ್ ಅನ್ನು ಬಾಡಿಗೆಗೆ ತರಲಾಗಿತ್ತು. ಅದರಲ್ಲಿ ರಾಜೇಶ್ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ ಅಕಸ್ಮಾತ್ ಆಗಿ ಪ್ರೇಮಾ ಈ ಟ್ರ್ಯಾಕ್ಟರ್ ನ ಅಲಗುಗಳಿಗೆ ಸಿಲುಕಿದ್ದಾರೆ. ಆದರೆ ಏನಾಗಿದೆ ಎಂದು ತಿಳಿಯುವಷ್ಟರಲ್ಲಿ ಪ್ರೇಮಾ ದೇಹ ಛಿದ್ರವಾಗಿತ್ತು. ಈ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.