-->
ಕಲ್ಲಡ್ಕ: ಮೂರನೇ ಫ್ಲ್ಯಾಟ್ ಮೇಲಿನಿಂದ ಬಿದ್ದು ಬಾಲಕ ಮೃತ್ಯು

ಕಲ್ಲಡ್ಕ: ಮೂರನೇ ಫ್ಲ್ಯಾಟ್ ಮೇಲಿನಿಂದ ಬಿದ್ದು ಬಾಲಕ ಮೃತ್ಯು

ಮಂಗಳೂರು: ಆಟವಾಡುತ್ತಿದ್ದ ವೇಳೆ  ಆಕಸ್ಮಿಕವಾಗಿ ಫ್ಲ್ಯಾಟ್ ನ ಮೂರನೇ ಮಹಡಿ ಮೇಲಿನಿಂದ ಬಿದ್ದು ಬಾಲಕ ಮೃತಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ಕಲ್ಲಡ್ಕದಲ್ಲಿ ನಡೆದಿದೆ.

ಕಲ್ಲಡ್ಕ ನಿವಾಸಿ ಅಹ್ಮದ್ ಅವರ ಪುತ್ರ ಆರನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಸಾಹಿಲ್(12) ಮೃತಪಟ್ಟ ಬಾಲಕ.

ಕಲ್ಲಡ್ಕ ಸಮೀಪದ ಗೊಳ್ತಮಜಲು ಸಿಟಿಪ್ಲಾಝಾ ಎಂಬ ಫ್ಲ್ಯಾಟ್ ನಲ್ಲಿ ಬಾಲಕನ ಕುಟುಂಬ ವಾಸಿಸುತ್ತಿತ್ತು. ಮಹಮ್ಮದ್ ಸಾಹಿಲ್ ಫ್ಲ್ಯಾಟ್ ನ ಇತರ ಬಾಲಕರೊಂದಿಗೆ ಮೂರನೇ ಮಹಡಿಯಲ್ಲಿ ಆಟವಾಡುತ್ತಿದ್ದ. ಆಗ ಆಯತಪ್ಪಿ ಬಾಲಕ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ‌. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article