-->
ಪುತ್ರಿಯ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿ ಪತಿ ಮನೆಗೆ ಕಳುಹಿಸಿಕೊಟ್ಟ ಮರುಕ್ಷಣವೇ ತಂದೆ ಮೃತ್ಯು: ಛೇ... ಇಂದೆಂಥಹಾ ದುರಂತ!

ಪುತ್ರಿಯ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿ ಪತಿ ಮನೆಗೆ ಕಳುಹಿಸಿಕೊಟ್ಟ ಮರುಕ್ಷಣವೇ ತಂದೆ ಮೃತ್ಯು: ಛೇ... ಇಂದೆಂಥಹಾ ದುರಂತ!

ಕೊಡಗು: ಪುತ್ರಿಯ ವಿವಾಹ ಸಂಭ್ರಮದಲ್ಲಿದ್ದ ತಂದೆ ಎಲ್ಲವೂ ಸುಸೂತ್ರವಾಗಿ ನೆರವೇರಿಸಿ ಪತಿಯ ಮನೆಗೆ ಕಳುಹಿಸಿಕೊಟ್ಟು ಎಲ್ಲವನ್ನೂ ಸಾಂಗವಾಗಿ ನಡೆಸಿಕೊಟ್ಟು ನಿಟ್ಟುಸಿರು ಬಿಡುವಷ್ಟರಲ್ಲಿ ಆಗಬಾರದ್ದೊಂದು ಆಗಿಹೋಗಿದೆ. ಪರಿಣಾಮ ಸಂಭ್ರಮದಲ್ಲಿದ್ದ ಕುಟಂಬಸ್ಥರು ಶೋಕಸಾಗರದಲ್ಲಿ ಮುಳುಗುವಂತಾಗಿದೆ. 

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ‌ ಈ ದುರಂತ ಸಂಭವಿಸಿದೆ. ಪರಿಣಾಮ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣವೇನೆಂದರೆ, ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದ ವಧುವಿನ ತಂದೆ ಕಿಬ್ಬೆಟ್ಟ ಗ್ರಾಮದ ಚಿನ್ನಪ್ಪ (60) ಎಂಬವರು ಮೃತಪಟ್ಟಿದ್ದು. 

ಮದುವೆಯ ಬಳಿಕ ಸಂಜೆ ಹೊತ್ತಿಗೆ ನವವಿವಾಹಿತರನ್ನು ಕಾರು ಹತ್ತಿಸಿ ಗೋಕಾಕ್​ಗೆ ಕಳುಹಿಸಿಕೊಟ್ಟಿದ್ದಾರೆ. ಅತ್ತ ಅವರು ಹೋಗುತ್ತಿದ್ದಂತೆ ಇತ್ತ ಚಿನ್ನಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಭ್ರಮದ ವಾತಾವರಣ ಕೆಲವೇ ಕ್ಷಣಗಳಲ್ಲಿ ಶೋಕಸಾಗರದಲ್ಲಿ ಮುಳುಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article