
ಭೀಕರ ಅಪಘಾತದಲ್ಲಿ ಕಾರು ಟಾಪ್ ಮೇಲೆ ಬಿದ್ದ ಮೃತದೇಹ!
5/22/2022 06:59:00 AM
ಮಂಗಳೂರು: ಕಾರು ಹಾಗೂ ಬೈಕೊಂದರ ನಡುವೆ ನಡೆದ ಅಪಘಾತದ ತೀವ್ರತೆಗೆ ಮೃತದೇಹ ಕಾರಿನ ಟಾಪ್ ಮೇಲೆ ಹಾರಿ ಬಿದ್ದ ಭೀಕರ ಘಟನೆಯೊಂದು ಚಾಮರಾಜನಗರದ ಕೊಳ್ಳೆಗಾಲದ ನರಿಪುರ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಉಮ್ಮತ್ತೂರು ಗ್ರಾಮದ ಮಹಾದೇವ ಸ್ವಾಮಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಇವರ ಮೃತದೇಹ ಕಾರಿನ ಟಾಪ್ ಮೇಲೆ ಹಾರಿ ಬಿದ್ದಿದೆ. ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ನಡೆದ ಸಂದರ್ಭ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಯವರು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದರು. ತಕ್ಷಣ ಅವರು ಗಾಯಾಳುವನ್ನು ತಮ್ಮ ಕಾರಿನಲ್ಲಿಯೇ ಕರೆದೊಯ್ಯಲು ಅನುವು ಮಾಡಿಕೊಟ್ಟಿದ್ದಾರೆ. ಸ್ಥಳಕ್ಕೆ ಕೊಳ್ಳೆಗಾಲ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.