ಕಾರು - ಬೈಕ್ ನಡುವೆ ಭೀಕರ ಅಪಘಾತ: ತಂದೆ - ಮಗ ಮೃತ್ಯು, ತಾಯಿ - ಮಗನಿಗೆ ಗಂಭೀರ ಗಾಯ

ಚಾಮರಾಜನಗರ: ಬೈಕ್ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ತಂದೆ - ಮಗ ಸ್ಥಳದಲ್ಲೇ ಮೃತಪಟ್ಟು, ತಾಯಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿಗೇಟಿನಲ್ಲಿ ನಡೆದಿದೆ. 

ಅಪಘಾತದಲ್ಲಿ ನಂಜನಗೂಡು ಮೂಲದ ಶಶಿಕುಮಾರ್ (35), ಮಗ ದರ್ಶನ್(6) ಸ್ಥಳದಲ್ಲೇ ಮೃತಪಟ್ಟರೆ, ಶಶಿಕುಮಾರ್ ಪತ್ನಿ ಚೈತ್ರಾ ಹಾಗೂ ಗಗನ್ (5) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೈಸೂರಿನಿಂದ ಗುಂಡ್ಲುಪೇಟೆಗೆ ಕಡೆ ತೆರಳುತ್ತಿದ್ದ ಕಾರೊಂದು ಪೆಟ್ರೋಲ್ ಹಾಕಲೆಂದು ಏಕಾಏಕಿ ಎಡಕ್ಕೆ ತಿರುಗಿದೆ. ಪರಿಣಾನ ಈ ಅವಘಡ ಉಂಟಾಗಿದೆ ಎನ್ನಲಾಗುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ರವಾನಿಸಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಬೇಗೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu