ಮದುವೆ ದಿಬ್ಬಣದ ವಾಹನ - ಕಾರು ಮುಖಾಮುಖಿ ‌ಢಿಕ್ಕಿ: ಕಾಂಗ್ರೆಸ್ ಮುಖಂಡ ದುರ್ಮರಣ, 8ಕ್ಕೂ ಅಧಿಕ ಮಂದಿ ಗಾಯ

ಕಾರವಾರ(ಉತ್ತರ ಕನ್ನಡ): ಮದುವೆ ದಿಬ್ಬಣಕ್ಕೆಂದು ಬಂದಿದ್ದವರನ್ನು ಮರಳಿ ಬಿಡಲು ಹೋಗುತ್ತಿದ್ದ ವಾಹನ ಹಾಗೂ ಕಾರೊಂದು ಮುಖಾಮುಖಿಯಾಗಿ ಡಿಕ್ಕಿಯಾದ ಕಾಂಗ್ರೆಸ್ ಮುಖಂಡ ಸ್ಥಳದಲ್ಲಿಯೇ ಮೃತಪಟ್ಟು, 8ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಸಿದ್ದಾಪುರ ತಾಲೂಕಿನ ಶಿರೂರು ಬಳಿ ನಡೆದಿದೆ.

ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್​ ನ ಮಾಜಿ ಸದಸ್ಯ ಮತ್ತು ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ. ಗೌಡ ಕಬ್ಬಿನ್ಮನೆ ಅಪಘಾತದಲ್ಲಿ ಮೃತಪಟ್ಟವರು. ಮದುವೆ ಮುಗಿಸಿ ದಿಬ್ಬಣದಲ್ಲಿ ಬಂದಿದ್ದವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ಅಪಘಾತದಲ್ಲಿ ಎರಡು ವಾಹನಗಳಲ್ಲಿದ್ದ 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu