ಮಡಿಕೇರಿ: 22 ಹುಲಿಯುಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಅರುಣ್ಯ ಘಟಕ ಬಂಧಿಸಿದೆ.
ಚಾಮರಾಜನಗರ ಜಿಲ್ಲೆಯ ಮೂಲದವರಾದ ಜಡೆಸ್ವಾಮಿ ಹಾಗೂ ರಾಮಚಂದ್ರ ಬಂಧಿತ ಆರೋಪಿಗಳು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಿದ್ದಾಪುರದ ಕಡೆಗೆ ಹೋಗುವ ರಸ್ತೆ ಬದಿಯಲ್ಲಿನ ಬಸ್ ತಂಗುದಾಣದ ಬಳಿ ಈ ಆರೋಪಿಗಳಿಬ್ಬರು ಅಕ್ರಮವಾಗಿ ಹುಲಿಯುಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪ್ರಕಾರ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು 22 ಹುಲಿಯ ಉಗುರುಗಳ ಸಹಿತ ಬಂಧಿಸಿದ್ದಾರೆ.