-->
ಟ್ರೈನ್ ನಿಲ್ಲಿಸಿ ಮದ್ಯ ಸೇವನೆ ಮಾಡಲು ತೆರಳಿದ ಲೋಕೊ ಪೈಲಟ್.. ನಿಲ್ದಾಣದಲ್ಲಿಯೇ 1 ಗಂಟೆ ರೈಲು ಬಾಕಿ

ಟ್ರೈನ್ ನಿಲ್ಲಿಸಿ ಮದ್ಯ ಸೇವನೆ ಮಾಡಲು ತೆರಳಿದ ಲೋಕೊ ಪೈಲಟ್.. ನಿಲ್ದಾಣದಲ್ಲಿಯೇ 1 ಗಂಟೆ ರೈಲು ಬಾಕಿ

ಹಸನ್​ಪುರ(ಬಿಹಾರ): ಬಿಹಾರದಲ್ಲಿ ಮದ್ಯ ಸೇವನೆಗೆ ನಿಷೇಧವಿದೆ. ಆದರೂ, ಮದ್ಯಪಾನ ಮಾಡಿ ಸಿಕ್ಕಿಬಿದ್ದಿರುವ ಸಾಕಷ್ಟು ಪ್ರಕರಣಗಳು ಕೇಳಿ ಬರುತ್ತಲೇ ಇದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಲೋಕೊ ಪೈಲಟ್​  ಓರ್ವನು ರೈಲು ನಿಲ್ಲಿಸಿ ಮದ್ಯ ಸೇವನೆ ಮಾಡಲು ಹೋಗಿದ್ದು, ಪರಿಣಾಮ ರೈಲು ಒಂದು ಗಂಟೆ ತಡವಾಗಿ ಹೊರಟ ಘಟನೆ ನಡೆದಿದೆ.

ಬಿಹಾರದ ಸಮಸ್ತಿಪುರ ಜಿಲ್ಲೆಯ ಹಸನ್​ಪುರದಲ್ಲಿ ಈ ಪ್ರಕರಣ ನಡೆದಿದೆ. ಮದ್ಯ ಸೇವಿಸಲೆಂದು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ತೆರಳಿರುವ ಲೋಕೊ ಪೈಲಟ್​, ಸುಮಾರು ಒಂದು ಗಂಟೆಗಳ ಕಾಲ ಆಗಮಿಸಿರಲಿಲ್ಲ. ಪರಿಣಾಮ ಪರ್ಯಾಯ ವ್ಯವಸ್ಥೆ ಮಾಡಿ, ರೈಲನ್ನು ಮುಂದಿನ ನಿಲ್ದಾಣಕ್ಕೆ ಕಳುಹಿಸಲಾಗಿದೆ.

ಬಿಹಾರದ ಸಮಸ್ತಿಪುರದಿಂದ ಸಹರ್ಸಾಗೆ 05278 ಪ್ಯಾಸೆಂಜರ್​ ರೈಲು ತೆರಳುತ್ತಿತ್ತು. ಆದರೆ ಈ ರೈಲು ಹಸನ್​ಪುರ ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ರೈಲು ನಿಂತಿದೆ. ಈ ವೇಳೆ, ಪ್ರಯಾಣಿಕರು ರೈಲು ಸಂಚಾರ ಮಾಡುವಂತೆ ಬಹಳ ಒತ್ತಾಯಿಸಿದ್ದಾರೆ. ಆದರೆ, ಲೋಕೊ ಪೈಲಟ್​​ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಬೇರೆ ಸಿಬ್ಬಂದಿಯ ಸಹಾಯದಿಂದ ರೈಲು ಮುಂದಿನ ನಿಲ್ದಾಣಕ್ಕೆ ಕಳುಹಿಸಿದ್ದಾರೆ.

ಈ ರೈಲಿನ ಲೋಕೋ ಪೈಲಟ್​ ಕರ್ಮವೀರ್​ ಪ್ರಸಾದ್​, ಹಸನ್​ಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ, ಮಾರುಕಟ್ಟೆಗೆ ಹೋಗಿದ್ದಾನೆ. ಅಲ್ಲಿ ಮದ್ಯ ಸೇವನೆ ಮಾಡಿ ಗಲಾಟೆ ಮಾಡಿದ್ದಾನೆ. ಈ ಬಗ್ಗೆ ರೈಲ್ವೆ ಇಲಾಖೆಗೆ ಮಾಹಿತಿ ಸಹ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆತನನ್ನು ಕರೆದುಕೊಂಡು ಬಂದು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಕರ್ಮವೀರ್​ ಬಳಿ ಇದ್ದ ಮದ್ಯದ ಬಾಟಲಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100